ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇನ್ನಿಲ್ಲ. ಬೆಂಗಳೂರಿನಲ್ಲಿ ಇಂದು ನಿಧನರಾದ ಲೀಲಾವತಿ ಎಲ್ಲರಿಗೂ ಮಾದರಿ ನಟಿ.
ಸುಮಾರು 50 ವರ್ಷಗಳ ಕಾಲ ಸಿನಿಲೋಕದಲ್ಲಿ ತಮ್ಮದೇ ಆದ ಮನೋಜ್ಞ ಅಭಿನಯದ ಮೂಲಕ ಗಮನಸೆಳೆದವರು.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. ಕನ್ನಡ ಮಾತ್ರವಲ್ಲ, ತಮಿಳು ಮತ್ತು ತೆಲುಗು ಸಹಿತ ದಕ್ಷಿಣ ಭಾರತದ 600 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು. ಕನ್ನಡದಲ್ಲೇ 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಈ ಪೈಕಿ ಡಾ.ರಾಜ್‌ಕುಮಾರ್ ಜೊತೆ ಅಭಿನಯಿಸಿದ್ದ ಹಲವು ಚಿತ್ರಗಳು ಲೀಲಾವತಿ ಅವರಿಗೆ ಹೆಸರನ್ನು ತಂದುಕೊಟ್ಟಿತ್ತು. ಫಿಲ್ಮ್‌ಫೇರ್ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರಗಳನ್ಬು ಅವರು ಪಡೆದಿದ್ದಾರೆ.
ಹಿರಿಯ ನಟಿ ಲೀಲಾವತಿ ಅವರ ನಿಧನಕ್ಕೆ ಚಿತ್ರೂದ್ಯಮ ಗಣ್ಯರು ಕಂಬನಿ ಮಿಡಿದಿದ್ದಾರೆ.






































































