ಹೈದರಾಬಾದ್: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಭಾರಿಸಿರುವ ಕಾಂಗ್ರೆಸ್ ತೆಲಂಗಾಣದಲ್ಲಿ ಹೊಸ ಸರ್ಕಾರ ರಚಿಸಿದ್ದು, 2ನೇ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಅಧಿಕಾರ ವಹಿಸಿಕೊಂಡರು.
Shri @revanth_anumula takes the oath as the CM of Telangana.
📍 Hyderabad pic.twitter.com/LrioYA0XYu
— Congress (@INCIndia) December 7, 2023
ಇದೇ ವೇಳೆ, ಸಚಿವರಾಗಿ ನಾಲಮಾಡ ಉತ್ತಮ್ ಕುಮಾರ್ ರೆಡ್ಡಿ, ಸಿ.ದಾಮೋದರ್ ರಾಜಾನರಸಿಂಹ, ಕೊಮಿಟಿರೆಡ್ಡಿ ವೆಂಕಟರೆಡ್ಡಿ, ದುದ್ದಿಲ್ಲ ಶ್ರೀಧರ್ ಬಾಬು, ಪೊಂಗುಲೇಟಿ ಶ್ರೀನಿವಾಸರೆಡ್ಡಿ, ಪೊನ್ನಂ ಪ್ರಭಾಕರ್, ಕೊಂಡಾ ಸುರೇಖಾ, ಅನುಸೂಯಾ ಸೀತಕ್ಕ, ತುಮ್ಮಲ ನಾಗೇಶ್ವರರಾವ್, ಜೂಪಲ್ಲಿ ಕೃಷ್ಣಾರಾವ್ ಅವರೂ ಪ್ರಮಾಣವಚನ ಸ್ವೀಕರಿಸಿದರು.
ಹೈದರಾಬಾದ್‌ನ ಎಲ್‌ಬಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರು ನೂತನ ಸಚಿವರಿಗೆ ಗೌಪ್ಯತೆಯ ಪ್ರಮಾಣವ ವಚನ ಬೋಧಿಸಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಸಂಸದ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಭಾಗಿಯಾಗಿದ್ದರು.


























































