ಹಾಸನ: ಹಾಸನ ಜಿಲ್ಲೆಯ ಬಿಟ್ಟಗೌಡನಹಳ್ಳಿಯ ಬಳಿ ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಶಾಲಾ ಶಿಕ್ಷಕಿಯನ್ನೇ ಅಪಹರಿಸಿರುವ ಘಟನೆ ನಡೆದಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಕೆಲಸ ಮಾಡುತ್ತಿದ್ದ ಅರ್ಪಿತಾ ಎಂಬವರನ್ನು ಶಾಲೆ ಮುಂಭಾಗದಿಂದಲೇ ಕಿಡಿಗೇಡಿಗಳು ಅಪಹರಿಸಿದ್ದಾರೆ. ಗುರುವಾರ ಬೆಳಿಗ್ಗೆ ಶಾಲೆಗೆ ಹೊರಟಿದ್ದಾಗ ಆಕೆಯ ಸಂಬಂಧಿಯೇ ಅಪಹರಣ ಮಾಡಿದ್ದಾನೆ ಎಂದು ಶಿಕ್ಷಕಿಯ ಪೋಷಕರು ಆರೋಪಿಸಿದ್ದಾರೆ. ಕೆಲವು ದಿನಗಳ ಹಿಂದೆ ರಾಮು ಎಂಬಾತ ಈ ಯುವತಿಯ ಮನೆಗೆ ತೆರಳಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ ಎನ್ನಲಾಗಿದೆ. ಆದರೆ ಮದುವೆಗೆ ಅರ್ಪಿತಾ ಹಾಗೂ ಮನೆಯವರು ಒಪ್ಪಿಕೊಂಡಿಲ್ಲ. ಈ ದ್ವೇಷದಿಂದ ಈ ಅಪಹರಣ ನಡೆದಿರಬಹುದು ಎಂದು ಶಿಕ್ಷಕಿಯ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ
























































