ಬೆಂಗಳೂರು: ನಾಡಿನೆಲ್ಲೆಡೆ ದಸರಾ ಸಡಗರ ಆವರಿಸಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಪಾಳಯದಲ್ಲೂ ಸಂಭ್ರಮ ಮನೆ ಮಾಡಿದೆ. ಆದರೆ ಇದು ಪೂಜಾ ಕೈಂಕರ್ಯದ ಸಡಗರವಲ್ಲ, ಸೇವಾ ತಯಾರಿಯ ಸಡಗರ.
ನಾಡಹಬ್ಬ ದಸರಾ ಪ್ರಯುಕ್ತ ನಾಡಿನ ಜನತೆಗೆ ಸಾರಿಗೆ ಸೌಲಭ್ಯ ಕಲ್ಪಿಸುವ ಸಂಬಂಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಎಲ್ಲಾ ವಿಭಾಗಗಳಲ್ಲಿ ದಸರಾ ವಿಶೇಷ ಕಾರ್ಯಾಚರಣೆಗೆ ವಿದ್ಯುಕ್ತವಾಗಿ ಬಸ್ಸುಗಳಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು, ಕೇಂದ್ರೀಯ ವಿಭಾಗದ ಅಧಿಕಾರಿಗಳು, ಕೆಂಪೇಗೌಡ ಬಸ್ ನಿಲ್ದಾಣದ
ಅಧಿಕಾರಿಗಳು ಮತ್ತು ಸಿಬ್ಬಂದಿ ಸಮೂಹದ ಪಾಲ್ಗೊಳ್ಳುವಿಕೆ ಗಮನಸೆಳೆಯಿತು..