ಹೈದರಾಬಾದ್: ತೆಲಂಗಾಣ ಬಿಜೆಪಿಯೊಳಗಿನ ಭಿನ್ನಾಭಿಪ್ರಾಯಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ವರಿಷ್ಠರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಹಿರಿಯ ನಾಯಕಿ ಮತ್ತು ಮಾಜಿ ಸಂಸದೆ ವಿಜಯಶಾಂತಿ ಅವರು ತೆಲಂಗಾಣ ರಚನೆಗೆ ಪ್ರಬಲ ವಿರೋಧಿಗಳಾಗಿರುವ ಕೆಲವು ವ್ಯಕ್ತಿಗಳ ಉಪಸ್ಥಿತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ದಿಢೀರನೆ ನಿರ್ಗಮಿಸಿದ್ದರು. ಅವರು ಯಾವುದೇ ಹೆಸರನ್ನು ಉಲ್ಲೇಖಿಸದಿದ್ದರೂ, ಅವರ ಅಸಮಾಧಾನವು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಮತ್ತು ಈಗ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿರುವ ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರತ್ತ ಬೊಟ್ಟು ಮಾಡಿದಂತಿದೆ.
ಪಕ್ಷದ ಹೈಕಮಾಂಡ್ ಕೆಲವು ನಾಯಕರ ದೂರುಗಳು ಮತ್ತುಹಿನ್ನೆಲೆಯಲ್ಲಿ ಅವರನ್ನು ಪದಚ್ಯುತಿ ಮಾಡಲಾಗಿದೆ ಎಂದು ನಿರ್ಗಮಿತ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್ ಆರೋಪಿಸಿದ್ದಾರೆ. ಬಂಡಿ ಸಂಜಯ್ ತಮ್ಮ ಭಾಷಣದಲ್ಲಿ ನಾಲಿಗೆ ಹರಿಬಿಟ್ಟು, ಪಕ್ಷದೊಳಗಿನವರು ಇತರರ ವಿರುದ್ಧ ದೂರು ನೀಡುವುದನ್ನು ಬಿಟ್ಟು ಕಿಶನ್ ರೆಡ್ಡಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಎಂದು ಒತ್ತಾಯಿಸಿದರು.
ಮತ್ತೋರ್ವ ಬಿಜೆಪಿ ನಾಯಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ಅವರು ತಮ್ಮ ಭಾಷಣದ ವೇಳೆ ಭಾವುಕರಾಗಿ ಬಂಡಿ ಸಂಜಯ್ ಅವರನ್ನು ರಾಜ್ಯ ಪಕ್ಷದ ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ದಕ್ಕೆ ಬೇಸರ ವ್ಯಕ್ತಪಡಿಸಿದರು. ಪಕ್ಷಕ್ಕೆ ಶಕ್ತಿ ತುಂಬಿದ ಕೀರ್ತಿ ಬಂಡಿ ಸಂಜಯ್ ಅವರಿಗೆ ಸಲ್ಲುತ್ತದೆ ಮತ್ತು ಅವರು ಬಿಜೆಪಿ ತೊರೆಯಲು ಯೋಜಿಸುತ್ತಿದ್ದಾರೆ ಎಂಬ ವದಂತಿಯನ್ನು ಹೊರಹಾಕಿದರು.
ಸಭೆಯಲ್ಲಿ ಕೇಂದ್ರ ನಾಯಕರಾದ ತರುಣ್ ಚುಗ್ ಮತ್ತು ಪ್ರಕಾಶ್ ಜಾವಡೇಕರ್ ಉಪಸ್ಥಿತರಿದ್ದು, ಸ್ಥಳೀಯ ಬಿಜೆಪಿ ನಾಯಕರ ಅಭಿಪ್ರಾಯಗಳನ್ನು ಆಲಿಸಿದ್ದಾರೆ.
ಕಿಶನ್ ರೆಡ್ಡಿ ತಮ್ಮ ಭಾಷಣದಲ್ಲಿ ಮುಂಬರುವ 100 ದಿನಗಳು ಬಿಜೆಪಿ ಪಾಲಿಗೆ ಮಹತ್ವದ್ದಾಗಿದೆ ಎಂದು ಹೇಳಿದರು. ಜುಲೈ 24 ಮತ್ತು 25 ರ ಡಬಲ್ ಬೆಡ್ ರೂಂ ಯೋಜನೆ ವಿರುದ್ಧ ಲು ಪಕ್ಷವು ಪ್ರತಿಭಟನೆಗಳನ್ನು ಆಯೋಜಿಸುತ್ತದೆ ಘೋಷಿಸಿದ ಅವರು ಹೊಸ ಅರ್ಜಿದಾರರಿಗೆ ಪಿಂಚಣಿ ಮತ್ತು ಪಡಿತರ ಚೀಟಿಗೆ ಒತ್ತಾಯಿಸಿ ಹೋರಾಟ ಬಿಜೆಪಿ ಉದ್ದೇಶಿಸಿದೆ.







































































