ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದೀಗ ಪರಿಪೂರ್ಣ ಸಂಪುಟವನ್ನು ಹೊಂದಿದೆ. ಶನಿವಾರ 24 ಸಚಿವರ ಪದಗ್ರಹಣ ನಡೆದಿದ್ದು, ಈ ಮೂಲಕ 34 ಮಂತ್ರಿಗಳನ್ನೊಂಡ ಸಂಪುಟ ರಾಜ್ಯಭಾರ ಆರಂಭಿಸಲು ಸಜ್ಜಾಗಿದೆ.
ಇದೀಗ ಖಾತೆ ಹಂಚಿಕೆಯ ಕುತೂಹಲ ಹೆಚ್ಚಿದೆ. ಈಗಾಗಲೇ ಖಾತೆ ಪಟ್ಟಿ ಸಿದ್ದವಾಗಿದ್ದು, ಭಾನುವಾರ ಹಂಚಿಯಾಗುವ ಸಾಧ್ಯತೆಗಳಿವೆ ಎನ್ಬಲಾಗುತ್ತಿದೆ.
ಸಚಿವರ ಸಂಭಾನೀಯ ಖಾತೆಗಳು ಹೀಗಿವೆ:
ಸಿಎಂ ಸಿದ್ದರಾಮಯ್ಯ-ಹಣಕಾಸು, ಸಂಪುಟ ವ್ಯವಹಾರ, ಗುಪ್ತಚರ ಇಲಾಖೆ,
ಡಿ.ಕೆ.ಶಿವಕುಮಾರ್- ಬೆಂಗಳೂರು ನಗರಾಭಿವೃದ್ಧಿ, ಜಲಸಂಪನ್ಮೂಲ,
ಡಾ.ಜಿ.ಪರಮೇಶ್ವರ್- ಗೃಹ,
ಹೆಚ್.ಕೆ.ಪಾಟೀಲ್-ಕಾನೂನು ಮತ್ತು ಸಂಸದೀಯ ವ್ಯವಹಾರ,
ಕೆ.ಹೆಚ್.ಮುನಿಯಪ್ಪ-ಆಹಾರ ಮತ್ತು ನಾಗರಿಕ ಸರಬರಾಜು,
ಕೆ.ಜೆ.ಜಾರ್ಜ್- ಇಂಧನ
ಎಂ.ಬಿ.ಪಾಟೀಲ್- ಬೃಹತ್ & ಮಧ್ಯಮ ಕೈಗಾರಿಕೆ, ಐಟಿ-ಬಿಟಿ
ರಾಮಲಿಂಗಾರೆಡ್ಡಿ- ಸಾರಿಗೆ,
ಪ್ರಿಯಾಂಕ್ ಖರ್ಗೆ-ಗ್ರಾಮೀಣಾಭಿವೃದ್ಧಿ & ಪಂಚಾಯತ್ರಾಜ್,
ಜಮೀರ್ ಅಹ್ಮದ್ ಖಾನ್- ವಸತಿ, ವಕ್ಫ್ ಖಾತೆ,
ಸತೀಶ್ ಜಾರಕಿಹೊಳಿ-ಲೋಕೋಪಯೋಗಿ ಇಲಾಖೆ,
ಕೃಷ್ಣ ಭೈರೇಗೌಡ- ಕಂದಾಯ
ಎನ್.ಚಲುವರಾಯಸ್ವಾಮಿ- ಕೃಷಿ
ಕೆ.ವೆಂಕಟೇಶ್- ಪಶುಸಂಗೋಪನಾ ಖಾತೆ,
ಡಾ.ಹೆಚ್.ಸಿ.ಮಹದೇವಪ್ಪ-ಸಮಾಜ ಕಲ್ಯಾಣ
ಈಶ್ವರ್ ಖಂಡ್ರೆ-ಅರಣ್ಯ,
ಕೆ.ಎನ್.ರಾಜಣ್ಣ-ಸಹಕಾರ,
ದಿನೇಶ್ ಗುಂಡೂರಾವ್-ಆರೋಗ್ಯ-ಕುಟುಂಬ ಕಲ್ಯಾಣ,
ಶರಣಬಸಪ್ಪ ದರ್ಶನಾಪುರ- ಸಣ್ಣ ಕೈಗಾರಿಕೆ,
ಶಿವಾನಂದ ಪಾಟೀಲ್- ಸಕ್ಕರೆ,
ಆರ್.ಬಿ.ತಿಮ್ಮಾಪುರ- ಅಬಕಾರಿ, ಮುಜರಾಯಿ,
ಎಸ್.ಎಸ್.ಮಲ್ಲಿಕಾರ್ಜುನ-ಗಣಿ ಮತ್ತು ಭೂ ವಿಜ್ಞಾನ
ಡಾ.ಶರಣ ಪ್ರಕಾಶ್ ಪಾಟೀಲ್- ಉನ್ನತ ಶಿಕ್ಷಣ,
ಮಂಕಾಳು ವೈದ್ಯ- ಮೀನುಗಾರಿಕೆ, ಬಂದರು ಮತ್ತು ಒಳಾಡಳಿತ ಸಾರಿಗೆ,
ಲಕ್ಷ್ಮೀ ಹೆಬ್ಬಾಳ್ಕರ್ -ಮಹಿಳಾ ಮತ್ತು ಮಕ್ಕಳ ಕಲ್ಯಾಣ,
ಶಿವರಾಜ್ ತಂಗಡಗಿ -ಹಿಂದುಳಿದ ವರ್ಗಗಳ ಕಲ್ಯಾಣ,
ರಹೀಂ ಖಾನ್-ಪೌರಾಡಳಿತ
ಡಿ.ಸುಧಾಕರ್- ಮೂಲಸೌಕರ್ಯ, ಹಜ್.























































