ಮಂಗಳೂರು: ಮತಾಂಧರ ಕ್ರೌರ್ಯಕ್ಕೆ ಬಲಿಯಾದ ಪ್ರವೀಣ್ ನೆಟ್ಟರು ಪತ್ನಿಗೆ ಬೊಮ್ಮಾಯಿ ಸರ್ಕಾರ ಕಲ್ಪಿಸಿದ್ದ ಸರ್ಕಾರಿ ನೌಕರಿ ಇದೀಗ ಕೊನೆಗೊಂಡಿದೆ. ಸರ್ಕಾರಿ ನೌಕರಿಯು ನೆಟ್ಟಾರು ಕುಟುಂಬಕ್ಕೆ ಆಧಾರವಾಗಬಹುದೆಂಬ ಸಮಾಜದ ಹಿರಿಯರ ಭರವಸೆ ಹುಸಿಯಾಗಿದೆ. ಇದರಲ್ಲಿ ಬೊಮ್ಮಾಯಿ ಸರ್ಕಾರದ್ದೇ ಲೋಪ ಎದ್ದುಕಾಣುತ್ತಿದೆ ಎಂದು ಬಿಜೆಪಿ ನಾಯಕರೇ ಅಸಮಾಧಾನ ಹೊರಹಾಕಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಅವರ ಸಚಿವಾಲಯದಲ್ಲಿ ಗುತ್ತಿಗೆ ಆಧಾರಿತ ಉದ್ಯೋಗ ನೀಡಲಾಗಿತ್ತು. ಮಾನವೀಯ ನೆಲೆಯಲ್ಲಿ ಮುಖ್ಯಮಂತ್ರಿ ವಿಶೇಷಾಧಿಕಾರ ಬಳಸಿ, ಕೆಲಸ ಕೊಡಿಸುವುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ರವರ ಭರವಸೆಯಂತೆ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ತಮ್ಮ ಸಚಿವಾಲಯದಲ್ಲಿ ಗ್ರೂಪ್ ಸಿ ದರ್ಜೆಯ ಹಿರಿಯ ಸಹಾಯಕಿ ಹುದ್ದೆಗೆ ನೇಮಕ ಮಾಡಿಸಿದ್ದರು.
ಬಿಜೆಪಿಗೆ ಕಾರ್ಯಕರ್ತರೇ ಜೀವಾಳ …
ಮತಾಂಧರಿಂದ ಹತ್ಯೆಗೀಡಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಪತ್ನಿಗೆ ತನ್ನ ಕಛೇರಿಯಲ್ಲಿ ಉದ್ಯೋಗ ನೀಡುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಘೋಷಿಸಿದ್ದಾರೆ.#JanaSpandana pic.twitter.com/A2We5MrIpQ
— Abhishek Suvarna (@Abhishe58426256) September 10, 2022
ಗುತ್ತಿಗೆ ಆಧಾರದಲ್ಲಿ ನೂತನ ಕುಮಾರಿಯವರನ್ನು 2022ರ ಸೆ. 22ರಂದು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಬಳಿಕ ಅವರನ್ನು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಕಚೇರಿಗೆ ನಿಯುಕ್ತಿ ಮಾಡಲಾಗಿತ್ತು.
ಮತಾಂಧರಿಂದ ಹತ್ಯೆಗೊಳಗಾದ ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರ್ ಅವರ ಪತ್ನಿ ಶ್ರೀಮತಿ ನೂತನ ಕುಮಾರಿ ಎಂ. ಅವರನ್ನು ಮುಖ್ಯಮಂತ್ರಿ ಶ್ರೀ @BSBommai ಅವರು ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಕಾರ್ಯಕರ್ತರ ಹಿತರಕ್ಷಣೆಗೆ ಬದ್ಧವಾಗಿದೆ ಬಿಜೆಪಿ. pic.twitter.com/P0Xl3F4vmb
— BJP Karnataka (@BJP4Karnataka) September 29, 2022
ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ನೂತನ ಕುಮಾರಿಯವರನ್ನು ಸೇವೆಯಿಂದ ಬಿಡುಗಡೆಗೊಳಿಸಲಾಗಿದೆ. ಈ ಬೆಳವಣಿಗೆ ಬಗ್ಗೆ ಕರಾವಳಿಯ ಹಿಂದೂ ಸಂಘಟನೆಗಳ ನಾಯಕರು ಬೇಸರ ಹೊರಹಾಕಿದ್ದಾರೆ. ಆದರೆ ಈ ಬೆಳವಣಿಗೆಗೆ ಹಿಂದೆ ಇದ್ದ ಬಿಜೆಪಿ ಸರ್ಕಾರ ಕಾರಣವೇ ಹೊರತು ಇದರಲ್ಲಿ ಸಿದ್ದರಾಮಯ್ಯ ಸರ್ಕಾರದ ಪಾತ್ರ ಇಲ್ಲ ಎಂಬುದು ಅಧಿಕಾರಿಗಳ ಸ್ಪಷ್ಟನೆ.
ನೂತನ ಕುಮಾರಿ ಅವರ ನೇಮಕಾತಿ ತಾತ್ಕಾಲಿಕವಾಗಿತ್ತು. ಅದರಲ್ಲೂ ಬೊಮ್ಮಾಯಿಯವರು ಸಿಎಂ ಪದವಿಯಲ್ಲಿ ಇರುವವರೆಗೆ ಮಾತ್ರ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಇದೆ. ಆದರೆ ಈ ಬಗ್ಗೆ ಸಿಎಂ ಆಗಲೀ, ಬಿಜೆಪಿ ರಾಜ್ಯಾಧ್ಯಕ್ಷರಾಗಲೀ ಯಾವುದೇ ಮಾಹಿತಿ ಹಂಚಿಕೊಂಡಿರಲಿಲ್ಲ. ಆದರೆ ಬಸವರಾಜ್ ಬೊಮ್ಮಾಯಿಯವರ ಅಧಿಕಾರ ಕೊನೆಗೊಳ್ಳುತ್ತಿದ್ದಂತೆಯೇ ನೂತನ ಕುಮಾರಿಯವರ ಸೇವಾವಧಿಯೂ ಮುಕ್ತಾಯಗೊಂಡಂತಾಗಿದೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ನಾಯಕರ ವಿರುದ್ದವೇ ಬೇಸರ ವ್ಯಕ್ತಪಡಿಸಿದ್ದಾರೆ.
https://twitter.com/Harsha66038092/status/1662329563895201795?t=yZsu9p-BpZaCvSK_6Q97Fg&s=19
ನೂತನ ಕುಮಾರಿಯವರ ಅತಂತ್ರ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನೆಟ್ಟಿಗರೊಬ್ಬರು ‘ಯಾವುದೆ ಸರ್ಕಾರಕ್ಕೂ ಈ ರೀತಿಯ ವ್ಯವಹಾರ ಭೂಷಣವಲ್ಲ. ಇಂದಲ್ಲ ನಾಳೆ ಇದಕ್ಕೆ ಸೂಕ್ತ ಬೆಲೆ ತೆರಬೇಕಾಗುತ್ತದೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಬೆಲೆ ತೆತ್ತಿದ್ದಾರೆ.
ಬಿಜೆಪಿಗರ ಕರ್ಮಕಾಂಡ 👉"ಪ್ರಸಕ್ತ ಮುಖ್ಯಮಂತ್ರಿ" ಇರುವ ತನಕ ಎಂದು ನೇಮಕಾತಿ ಆದೇಶದ ಹಿನ್ನಲೆ.
ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿಯವರಿಗೆ ಉದ್ಯೋಗದಿಂದ ಬಿಡುಗಡೆ.— ಕರುನಾಡಿನ ಮಿನುಗುವ ನಕ್ಷತ್ರ💛❤️ (@NaadaPremiSha) May 27, 2023
ಡಿಸಿ ಔದಾರ್ಯ..!
ಈ ನಡುವೆ, ಸರ್ಕಾರದ ಆದೇಶದಂತೆ ನೂತನ ಕುಮಾರಿಯವರ ಹುದ್ದೆಗೆ ಕುತ್ತು ಬಂದಿರಬಹುದು. ಆದರೆ ಮಾನವೀಯ ನೆಲೆಯಲ್ಲಿ ಅವರಿಗೆ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ನೀಡುವ ಅಧಿಕಾರ ಈಗಿನ ಸರ್ಕಾರಕ್ಕೆ ಇದೆ. ಅದರಂತೆ ‘ತಮ್ಮನ್ನು ಮುಂದುವರಿಸಲು ನೂತನ ಕುಮಾರಿಯವರು ಕೋರಿದರೆ, ಅದನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ತಿಳಿಸಿದ್ದಾರೆ.























































ಡಿಸಿ ಔದಾರ್ಯ..!