ಮಂಗಳೂರು: ಪ್ರತಿಷ್ಠೆಯ ಅಖಾಡವಾಗಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಜೆಡಿಎಸ್ ಅಭ್ಯರ್ಥಿಯೇ ಸವಾಲಾಗಿ ಪರಿಣಮಿಸಿದ್ದಾರೆ. ಬಿಜೆಪಿಯ ಹಿಡಿತದಲ್ಲಿರುವ ಈ ಕ್ಷೇತ್ರವನ್ನು ಗೆಲ್ಲುವ ರಣೋತ್ಸಾಹದಲ್ಲಿದ್ದ ಕಾಂಗ್ರೆಸ್ಗೆ ಟಿಕೆಟ್ ಹಂಚಿಕೆಯಲ್ಲಾದ ಗೊಂದಲದಿಂದಾಗಿ ಪ್ರಬಲ ಕಾಂಗ್ರೆಸ್ ನಾಯಕರನ್ನೊಳಗೊಂಡ ಗುಂಪು ಸಿಡಿದು ಜೆಡಿಎಸ್ಗೆ ಹೋಗಿದ್ದು ಇದೀಗ ಬಿಜೆಪಿಯನ್ನು ಮಣಿಸಲು ನಿರ್ಣಾಯಕ ಹೋರಾಟದಲ್ಲಿ ಕೈ ನಾಯಕರು ತೊಡಗಿದ್ದಾರೆ.
ಅಲ್ಪಸಂಖ್ಯಾತರೂ ಪ್ರಾಬಲ್ಯವಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಚದುರಿ ಹೋಗುವುದನ್ನು ತಡೆಯಲು ಕಾಂಗ್ರೆಸ್ ಹರಸಾಹಸ ನಡೆಸುತ್ತಿದ್ದಾರೆ. ಈ ಸಂಬಂಧ ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವಾ ಅವರು ಮಂಗಳೂರು ಉತ್ತರದಲ್ಲಿ ಗಮನ ಕೇಂದ್ರೀಕರಿಸಿದ್ದಾರೆ. ಸುರತ್ಕಲ್ ಕ್ಷೇತ್ರ ಎಂದೇ ಗುರುತಾಗಿರುವ ಇಲ್ಲಿ ವಾರಾಂತ್ಯದ ದಿನವಾದ ಶನಿವಾರ ಜಿ.ಎ.ಬಾವಾ ಅವರು ಮುಸ್ಲಿಮ್ ಮುಖಂಡರ ಸರಣಿ ಸಭೆಗಳನ್ನ ನಡೆಸಿ ಕಾರ್ಯಕರ್ತರಲ್ಲಿ ಶಕ್ತಿ ತುಂಬಿದರು. ಬಿಲ್ಲವ ಸಮುದಾಯದ ಮುಖಂಡರ ಜೊತೆಗೂ ಚರ್ಚೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಆಲಿ ಅವರನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯದರ್ಶಿಯೂ ಆದ ಜಿ.ಎ.ಬಾವಾ, ಕಾಂಗ್ರೆಸ್ ಪಕ್ಷದಲ್ಲಿ ನಾಯಕರಾಗಿ ಗುರುತಿಸಿಕೊಂಡಿದ್ದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣದಿಂದ ಪಕ್ಷ ತ್ಯಜಿಸಿ ಜೆಡಿಎಸ್ಗೆ ಜಿಗಿದಿರುವುದು ದುರದೃಷ್ಟಕರ ಎಂದರು. ಅವರು ಅಧಿಕಾರಕ್ಕಾಗಿ ಈ ರೀತಿ ನಡೆದುಕೊಂಡಿದ್ದು, ಈ ಸ್ವಾರ್ಥದ ನಡೆಯನ್ನು ಸಮಾಜ ಒಪ್ಪಿಕೊಳ್ಳದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವು ದೇಶದ ಜನರ ಹಿತಾಸಕ್ತಿಯನ್ನೇ ಮೂಲ ಉದ್ದೇಶವನ್ನಾಗಿ ಹೊಂದಿದೆ ಎಂದ ಜಿ.ಎ.ಬಾವಾ, ತಳಮಟ್ಟದ ಸಮುದಾಯಕ್ಕೂ ನ್ಯಾಯ ಒದಗಿಸುವ ದೃಷ್ಟಿಯಿಂದ ಮೀಸಲಾತಿ ವ್ಯವಸ್ಥೆಯನ್ನು ಸುಸೂತ್ರವಾಗಿ ರೂಪಿಸಲಾಗಿತ್ತು. ಆದರೆ ಈಗಿನ ಬಿಜೆಪಿ ಸರ್ಕಾರವು ಒಂದು ವರ್ಗದ ಮೀಸಲಾತಿಯನ್ನು ಕಿತ್ತು ಬೇರೆಯವರಿಗೆ ನೀಡಿದೆ. ಇದನ್ನು ಪ್ರಜ್ಞಾವಂತರು ಒಪ್ಪಲಾರರು ಎಂದರು. ಈ ಚುನಾವಣೆಯಲ್ಲಿ ಜನರು ಬಿಜೆಪಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದವರು ಹೇಳಿದರು.