ಬೆಳಗಾವಿ: ರಾಜ್ಯದಲ್ಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಹಾಗೂ 40% ಕಮೀಷನ್ ಆರೋಪಗಳ ಬಗ್ಗೆ ಪ್ರಧಾನಿ ಮೋದಿಯವರು ಮೌನವಿರುವುದೇಕೆ? ಎಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕರ್ನಾಟಕದ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀಷನನ್ನು ಬಿಜೆಪಿ ಸರ್ಕಾರ ದೋಚಿದೆ. ಈ ವಿಚಾರ ಪ್ರಧಾನ ಮಂತ್ರಿಯವರಿಗೆ ಗೊತ್ತಿಲ್ಲ ಎಂದೇನಿಲ್ಲ. ಕರ್ನಾಟಕದ ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಕೇಳುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಆದರೆ ಇದುವರೆಗೂ ಪ್ರಧಾನಿ ಅವರ ಪತ್ರಕ್ಕೆ ಉತ್ತರ ನೀಡಿಲ್ಲ. ಮಠಾಧೀಶರೊಬ್ಬರು ಸಹ ನನ್ನ ಹತ್ತಿರವೂ 30 ಪರ್ಸೆಂಟ್ ಕಮೀಷನನ್ನು ಈ ಸರ್ಕಾರ ಪಡೆದುಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದರು.
ಪ್ರಧಾನಿ ಮೋದಿಯವರು 40% ಕಮಿಷನ್ ಸರ್ಕಾರದ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ?
– ಪ್ರಧಾನಿಯವರು ಕೈಗೊಂಡ ಕ್ರಮದಂತೆ ಎಷ್ಟು ಜನರನ್ನು ಬಂಧಿಸಿದ್ದಾರೆ?
– ಪ್ರಧಾನಿಯವರು ಎಷ್ಟು ತನಿಖೆ ನಡೆದಿದ್ದಾರೆ?
40% ಕಮಿಷನ್ ನಲ್ಲಿ ಕರ್ನಾಟಕದ ಇಂಜಿನ್‌ಗೆ ಎಷ್ಟು, ದೆಹಲಿಯ ಇಂಜಿನ್‌ಗೆ ಎಷ್ಟು ಪಾಲು ಸಿಕ್ಕಿತು ಎಂದು ಪ್ರಧಾನಿಗಳು ಹೇಳಬೇಕು!
-… pic.twitter.com/VwEFsEJfWm— Karnataka Congress (@INCKarnataka) May 6, 2023
ಪಿಎಸೈ ನೇಮಕಾತಿಯಲ್ಲಿ, ಸಹಾಯಕ ಉಪನ್ಯಾಸಕ ನೇಮಕಾತಿ, ಸಹಕಾರಿ ಬ್ಯಾಂಕಿನ ನೇಮಕಾತಿಯಲ್ಲಿ ಹಗರಣ ನಡೆದಿದೆ. ಇಂದು ಪ್ರತಿ ಹಂತದಲ್ಲೂ ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರಧಾನಿ ಮೋದಿ ಅವರು ಇಂದು ಕರ್ನಾಟಕ ರಾಜ್ಯಕ್ಕೆ ಬರ್ತಾರೆ, ಭಾಷಣ ಮಾಡ್ತಾರೆ ಆದರೆ ಇಲ್ಲಿ ಎಸಗಿರುವ ಭ್ರಷ್ಟಚಾರದ ಬಗ್ಗೆ ಮಾತನಾಡಲ್ಲ ಎಂದವರು ತರಾಟೆಗೆ ತೆಗೆದುಕೊಂಡರು.
ಕಳೆದ ಮೂರು ವರ್ಷಗಳಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನಾನು ಪ್ರಧಾನಿ ಅವರಿಗೆ ನಾನು ಸವಾಲು ಹಾಕ್ತೇನೆ, ನೀವು ಯಾರ ವಿರುಧ್ಧ ಕ್ರಮಕೈಗೊಂಡಿದ್ದೀರಿ, ಎಷ್ಟು ಜನರನ್ನು ಜೈಲಿಗೆ ಕಳುಹಿಸಿದ್ರಿ, ದುರಾದೃಷ್ಟವಶಾತ್ ಪ್ರಧಾನಿ ಅದರ ಬಗ್ಗೆ ಒಂದು ಶಬ್ಧವನ್ನು ಇದುವರೆಗೆ ತೆಗೆದಿಲ್ಲ. ಇಲ್ಲಿ ಬರ್ತಾರೆ, ಯಾವುದದಾರೊಂದು ನೆಪ ಹೇಳಿ ದೆಹಲಿಗೆ ವಾಪಸ್ಸು ಹೋಗ್ತಾರೆ ಎಂದವರು ಟೀಕಿಸಿದರು.
ಬೆಲೆಯೇರಿಕೆ, ಗ್ಯಾಸ್ ಸಿಲೆಂಡರ್ 1100 ಆಗಿದೆ, ಪ್ರೆಟ್ರೋಲ್ 100 ಗಡಿ ದಾಟಿದೆ, ದೇಶದಲ್ಲಿ ನಿರುದ್ಯೋಗ ಹೆಚ್ಚಳವಾಗಿದೆ. ವರ್ಷಕ್ಕೆ 2 ಕೋಟಿ ಜನಕ್ಕೆ ಉದ್ಯೋಗದ ಕೊಡ್ತೀರಾ ಅಂತ ಹೇಳಿದ್ರಿ ಇಷ್ಟು ಜನರಿಗೆ ಉದ್ಯೋಗ ನೀಡಿದ್ರಿ, ರಾಜ್ಯಗಳ ಮಧ್ಯಗಿರುವ ನೀರಿನ ವಿವಾದವನ್ನು ಹೇಗೆ ಬಗೆಹರಿಸಿದ್ದೀರಿ, ರಾಜ್ಯದಲ್ಲಿ ಪ್ರವಾಹ ಬಂದಾಗ ಅವಾಗ ನೀವು ಏನು ಮಾಡಿದ್ರಿ. ಕರ್ನಾಟಕ್ಕಾಗಿ ನೀವು ಏನು ಮಾಡಿಲ್ಲ ಎಂದ ರಾಹುಲ್ ಗಾಂಧಿ, ಇಂದು ಪ್ರಮುಖ ವಿಷಯಗಳ ಕುರಿತು ಪ್ರಧಾನಿ ಅವರು ಮಾತನಾಡಲ್ಲ. ರೈತರು, ಕಾರ್ಮಿಕರು, ಬಡವರು, ಯುವಕರಿಗಾಗಿ ಒಂದು ಶಬ್ದವನ್ನು ಎತ್ತಲ್ಲ. ಇವತ್ತು ಬರೀ ಭಾಷಣದಲ್ಲಿ ಹೇಳ್ತಾರೆ, ಕಾಂಗ್ರೆಸ್ ನವರು 91 ಸಲ ನನ್ನನ್ನು ಬೈದಿದ್ದಾರೆ ಅಂತ ಪ್ರಧಾನಿ ಅವರು ಹೇಳ್ತಾರೆ. ಇಂದು ಯಾವ ವಿಷಯದ ಬಗ್ಗೆ ಚರ್ಚೆ ನಡೆಸಬೇಕಿತ್ತೋ, ಆ ವಿಷಯದ ಬಗ್ಗೆ ಅವರು ಎಂದಿಗೂ ಪ್ರಸ್ತಾಪ ಮಾಡುತ್ತಿಲ್ಲ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ನುಡಿದಂತೆ ನಡೆಯುತ್ತದೆ. ದೇಶದ ಜನರಿಗೆ 15 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದರು. ಅಂತಹ ಸುಳ್ಳು ಭರವಸೆಯನ್ನು ಕಾಂಗ್ರೆಸ್ ಎಂದಿಗೂ ಮಾಡೋದಿಲ್ಲ. ನೋಟು ಅಮಾನ್ಯೀಕರಣದಂತಹ ಕೆಟ್ಟ ಕೆಲಸ ನಾವು ಎಂದಿಗೂ ಮಾಡೋದಿಲ್ಲ. ಬಡವರಿಗೆ, ಯುವಕರ ಮತ್ತು ರೈತರ, ಕಿಸಾನ್ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ, ನಾವು ಎಂದಿಗೂ ಮಾಡಿಲ್ಲ ಎಂದರು.