ಬೆಂಗಳೂರು: ರಾಜ್ಯದ ಚುನಾವಣಾ ಅಖಾಡದಲ್ಲಿ ರಾಜಕೀಯ ಪಕ್ಷಗಳ ಗುದ್ದಾಟ ತೀವ್ರಗೊಂಡಿದೆ. ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ಪಕ್ಷಗಳ ನಾಯಕರು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿದ್ದು, ಈ ಪೈಕಿ ಕಾಂಗ್ರೆಸ್ ಪಕ್ಷವು ಬಿಜೆಪಿ ಸರ್ಕಾರ ವಿರುದ್ದದ 40% ಕಮೀಷನ್ ಆರೋಪವನ್ನೇ ಪ್ರಮುಖ ಅಸ್ತ್ರವನ್ನಾಗಿಸಿದೆ. ಇದರ ಜೊತೆಗೆ ಬಿಟ್ ಕಾಯಿನ್ ಹಗರಣವನ್ನೂ ಕಾಂಗ್ರೆಸ್ ಪಕ್ಷವು ಅಖಾಡಕ್ಕೆ ಎಳೆದು ತಂದಿದೆ.
ಪ್ರಸ್ತುತ ಬಿಜೆಪಿ ಪರ ಮತಬೇಟೆಗಾಗಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ರಣಾಂಗಣಕ್ಕಿಳಿದಿದ್ದು, ಅವರತ್ತ 40% ಕಮೀಷನ್ ಆರೋಪದ ಅಸ್ತ್ರವನ್ನು ಪ್ರಯೋಗಿಸಿ ಮುಜುಗರದ ಪರಿಸ್ಥಿತಿ ಚತಂದೊಡ್ಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ. ಇದರ ಜೊತೆಗೂ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಎಲ್ಲಿ ಎಂಬ ಕಾಂಗ್ರೆಸ್ ಪ್ರಶ್ನೆ ಕುತೂಹಲದ ಕೇಂದ್ರಬಿಂದುವಾಗಿದೆ.
ಹಿಂದಿನ ಕಾಂಗ್ರೆಸ್ ಆಡಳಿತ ಬಗ್ಗೆ ಪದೇ ಪದೇ ಕೆಣಕುತ್ತಿರುವ ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನು ಕಾಂಗ್ರೆಸ್ ಇಡುತ್ತಲೇ ಇದೆ. ಕರ್ನಾಟಕದಲ್ಲಿ ತಮ್ಮ ಡಬಲ್ ಇಂಜಿನ್ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪದ ಬಗ್ಗೆ ಪ್ರಧಾನಿ ಮೋದಿಯವರು ತುಟಿ ಬಿಚ್ಚುತ್ತಿಲ್ಲ. ಪ್ರಶ್ನೆ ಮಾಡಿದವರ ವಿರುದ್ಧ ಮುಗಿ ಬೀಳುವ ಐಟಿ, ಇಡಿ, ಸಿಬಿಐ 40% ಕಮಿಷನ್ ವಿಚಾರದಲ್ಲಿ ಎಲ್ಲಿ ಹೋಗಿವೆ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದೆ.
ಕರ್ನಾಟಕದಲ್ಲಿ ತಮ್ಮ ಡಬಲ್ ಇಂಜಿನ್ ಸರ್ಕಾರದ ವಿರುದ್ಧದ 40% ಕಮಿಷನ್ ಆರೋಪದ ಬಗ್ಗೆ ಪ್ರಧಾನಿ ಮೋದಿಯವರು ತುಟಿ ಬಿಚ್ಚುತ್ತಿಲ್ಲ.
ಪ್ರಶ್ನೆ ಮಾಡಿದವರ ವಿರುದ್ಧ ಮುಗಿ ಬೀಳುವ ಐಟಿ, ಇಡಿ, ಸಿಬಿಐ 40% ಕಮಿಷನ್ ವಿಚಾರದಲ್ಲಿ ಎಲ್ಲಿ ಹೋಗಿವೆ?
6.5 ಕೋಟಿ ಕನ್ನಡಿಗರ ನಿರೀಕ್ಷೆಯನ್ನು ಕಾಂಗ್ರೆಸ್ ಸರ್ಕಾರ ಮಾತ್ರ ಈಡೇರಿಸಲು ಸಾಧ್ಯ.
– @kharge pic.twitter.com/6FYXy4K2H8— Karnataka Congress (@INCKarnataka) April 29, 2023
ನಮ್ಮ ಮಗು ಬೇರೆಯವರ ಮನೆಯಿಂದ ಏನನ್ನಾದರೂ ಕದ್ದು ತಂದಾಗ, ಅದು ತಪ್ಪು ಎಂದು ನಾವು ಅದಕ್ಕೆ ಅರ್ಥಮಾಡಿಸುತ್ತೇವೆ. ಹಾಗೆಯೇ, ಈ 40% ಸರ್ಕಾರ ಕರ್ನಾಟಕವನ್ನು ಲೂಟಿ ಮಾಡುತ್ತಿದೆ. ಈ ಲೂಟಿಕೋರ ಸರ್ಕಾರ ನಡೆಸುತ್ತಿರುವವರಿಗೆ ಅದು ತಪ್ಪು ಎಂದು ಯಾವಾಗ ಅರ್ಥಮಾಡಿಸುತ್ತೀರಿ? ಎಂದು ಕಾಂಗ್ರೆಸ್ ನಾಯಕರು ಪ್ರಶ್ನೆ ಮಾಡಿದ್ದಾರೆ. ಎಐಸಿಸಿ ನಾಯಕಿ ಪ್ರಿಯಾಂಕಾ ಗಾಂಧಿ ಅವರ ವಾಕ್ಪ್ರಹಾರ ಕೂಡಾ ಗಮನಸೆಳೆದಿದೆ.
ನಮ್ಮ ಮಗು ಬೇರೆಯವರ ಮನೆಯಿಂದ ಏನನ್ನಾದರೂ ಕದ್ದು ತಂದಾಗ, ಅದು ತಪ್ಪು ಎಂದು ನಾವು ಅದಕ್ಕೆ ಅರ್ಥಮಾಡಿಸುತ್ತೇವೆ.
ಹಾಗೆಯೇ,
ಈ 40% ಸರ್ಕಾರ ಕರ್ನಾಟಕವನ್ನು ಲೂಟಿ ಮಾಡುತ್ತಿದೆ.ಈ ಲೂಟಿಕೋರ ಸರ್ಕಾರ ನಡೆಸುತ್ತಿರುವವರಿಗೆ ಅದು ತಪ್ಪು ಎಂದು ಯಾವಾಗ ಅರ್ಥಮಾಡಿಸುತ್ತೀರಿ?
– @priyankagandhi#ಕಾಂಗ್ರೆಸ್_ಬರಲಿದೆ_ಪ್ರಗತಿ_ತರಲಿದೆ pic.twitter.com/TeT8yRkuRQ— Karnataka Congress (@INCKarnataka) April 29, 2023
ಕರ್ನಾಟಕ ಇತಿಹಾಸದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅವರ ಮಗ ಜಗದೀಶ್ ಒಟ್ಟಿಗೆ ಜೈಲಿಗೆ ಹೋಗಿದ್ದರು. ಹೆಬ್ಬಾಳದಲ್ಲಿ ಇವರ ಪರವಾಗಿ ರೋಡ್ ಶೋ ಮಾಡುವುದು ಯಾವಾಗ ಮೋದಿ ಅವರೇ? ಭ್ರಷ್ಟರಿಗೆ, ಕ್ರಿಮಿನಲ್‌ಗಳಿಗೆ, ರೌಡಿ ಶೀಟರ್‌ಗಳಿಗೆ, ಸಿಡಿ ಶೂರರಿಗೆ ಟಿಕೆಟ್ ನೀಡಿ ಅವರ ಪರ ಮತ ಕೇಳುವುದಕ್ಕೆ ನಾಚಿಕೆ ಎನಿಸದೇ? ಎಂಬ ಟ್ವೀಟ್ ಕೂಡಾ ಕುತೂಹಲದ ಕೇಂದ್ರಬಿಂದುವಾಗಿದೆ.
ಕರ್ನಾಟಕ ಇತಿಹಾಸದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅವರ ಮಗ ಜಗದೀಶ್ ಒಟ್ಟಿಗೆ ಜೈಲಿಗೆ ಹೋಗಿದ್ದರು.
ಹೆಬ್ಬಾಳದಲ್ಲಿ ಇವರ ಪರವಾಗಿ ರೋಡ್ ಶೋ ಮಾಡುವುದು ಯಾವಾಗ @narendramodi ಅವರೇ?
ಭ್ರಷ್ಟರಿಗೆ, ಕ್ರಿಮಿನಲ್‌ಗಳಿಗೆ, ರೌಡಿ ಶೀಟರ್‌ಗಳಿಗೆ, ಸಿಡಿ ಶೂರರಿಗೆ ಟಿಕೆಟ್ ನೀಡಿ ಅವರ ಪರ ಮತ ಕೇಳುವುದಕ್ಕೆ ನಾಚಿಕೆ ಎನಿಸದೇ?
— Karnataka Congress (@INCKarnataka) April 29, 2023
ಕೆಲಸಕ್ಕೆ ಬಾರದ ಮಾತುಗಳನ್ನು ಬಿಡಿ, 40% ಕಮಿಷನ್ ಬಗ್ಗೆ ಪತ್ರಗಳ ಬಗ್ಗೆ ಕನ್ನಡಿಗರಿಗೆ ಏನು ಉತ್ತರ ತಂದಿದ್ದೀರಿ ಹೇಳಿ? ಈ ಹಿಂದೆ ನೀವೇ ರೋಡ್ ಶೋ ನಡೆಸಿದ ರಸ್ತೆ ಕಿತ್ತುಹೋದಾಗ ತಾವೇ ನೀಡಿದ ನೋಟಿಸ್ ಬಗ್ಗೆ ಮುಂದೇನಾಯ್ತು ಹೇಳಿ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಬಿಟ್ ಕಾಯಿನ್ ಪ್ರಕರಣವನ್ನೂ ಅಖಾಡಕ್ಕೆ ಎಳೆದು ತಂದಿದೆ. ಬಿಟ್ ಕಾಯಿನ್ ಶ್ರೀಕಿ ಎಲ್ಲೋದ ಹೇಳಿ? ಎಂದು ಪ್ರಧಾನಿ ಮೋದಿ ಅವರನ್ನು ಕೇಳಿರುವ ವೈಖರಿಯೂ ಕುತೂಹಲ ಮೂಡಿಸಿದೆ.
'@narendramodi ಅವರೇ,
ಕೆಲಸಕ್ಕೆ ಬಾರದ ಮಾತುಗಳನ್ನು ಬಿಡಿ,40% ಕಮಿಷನ್ ಬಗ್ಗೆ ಪತ್ರಗಳ ಬಗ್ಗೆ ಕನ್ನಡಿಗರಿಗೆ ಏನು ಉತ್ತರ ತಂದಿದ್ದೀರಿ ಹೇಳಿ?
ಈ ಹಿಂದೆ ನೀವೇ ರೋಡ್ ಶೋ ನಡೆಸಿದ ರಸ್ತೆ ಕಿತ್ತುಹೋದಾಗ ತಾವೇ ನೀಡಿದ ನೋಟಿಸ್ ಬಗ್ಗೆ ಮುಂದೇನಾಯ್ತು ಹೇಳಿ?
ಬಿಟ್ ಕಾಯಿನ್ ಶ್ರೀಕಿ ಎಲ್ಲೋದ ಹೇಳಿ?#DoubleEngineDoubleCorruption
— Karnataka Congress (@INCKarnataka) April 29, 2023
ಕಾಂಗ್ರೆಸ್ ಪಕ್ಷ ಘೋಷಿಸಿರುವ 4 ಗ್ಯಾರಂಟಿಗಳು ಕೇವಲ ಗ್ಯಾರಂಟಿಗಳಲ್ಲ, ಅವು ರಾಜ್ಯದ ಜನರ ನಿತ್ಯದ ಬದುಕಿನ ಭಾಗವಾಗಿವೆ. 4 ಗ್ಯಾರಂಟಿಗಳು, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲುವುದನ್ನು ಖಚಿತಪಡಿಸಿವೆ, 40% ಕಮಿಷನ್ ಬಿಜೆಪಿ ಸರ್ಕಾರವನ್ನು ಕೇವಲ 40 ಸ್ಥಾನಗಳಿಗೆ ಇಳಿಸಿ ಮನೆಗೆ ಕಳಿಸಲಿವೆ ಎಂದು ಕಾಂಗ್ರೆಸ್ ವ್ಯಂಗ್ಯವಾಡುತ್ತಲಿದೆ.
ಕಾಂಗ್ರೆಸ್ ಪಕ್ಷ ಘೋಷಿಸಿರುವ 4 ಗ್ಯಾರಂಟಿಗಳು ಕೇವಲ ಗ್ಯಾರಂಟಿಗಳಲ್ಲ, ಅವು ರಾಜ್ಯದ ಜನರ ನಿತ್ಯದ ಬದುಕಿನ ಭಾಗವಾಗಿವೆ.
4 ಗ್ಯಾರಂಟಿಗಳು,
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 150 ಸ್ಥಾನ ಗೆಲ್ಲುವುದನ್ನು ಖಚಿತಪಡಿಸಿವೆ,40% ಕಮಿಷನ್ ಬಿಜೆಪಿ ಸರ್ಕಾರವನ್ನು ಕೇವಲ 40 ಸ್ಥಾನಗಳಿಗೆ ಇಳಿಸಿ ಮನೆಗೆ ಕಳಿಸಲಿವೆ!#CongressWillWin150
— IYC Karnataka (@IYCKarnataka) April 27, 2023






















































