ಬೆಂಗಳೂರು: ಸಂಚಾರ ನಿಯಮ ಉಲ್ಲಘನೆ ಸಂಬಂಧದ ರಿಯಾಯಿತಿ ಮೊತ್ತದಲ್ಲಿ ಡಂಡ ಕಟ್ಟಲು ನಿಗದಿಪಡಿಸಲಾದ ಅವಧಿ ಮುಗಿದಿದ್ದು ನೂರಾರು ಮಂದಿ ನಿರಾಶರಾಗಿದ್ದಾರೆ.
ಸಂಚಾರ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿಕೊಂಡಿರುವ ಸವಾರರು ಶೇ.50 ಆಫರ್ ಲಾಭ ಪಡೆಯಲು ಶನಿವಾರ ಕೊನೆಯದಿನವಾಗಿತ್ತು, ಅಷ್ಟರಲ್ಲೇ ರಿಯಾಯಿತಿ ಮೊತ್ತದಲ್ಲಿ ದಂಡ ಕಟ್ಟಲು ಸರ್ಕಾರ ನಿಗದಿಪಡಿಸಿದ ಅವಧಿಯಲ್ಲಿ ಸುಮಾರು 120 ಕೋಟಿ ರೂಪಾಯಿ ಪಾವತಿಯಾಗಿದೆ ಎನ್‌ಲಾಗಿದೆ. ಬೆಂಗಳೂರು ನಗರದಲ್ಲೇ ಸುಮಾರು 102 ಕೋಟಿ ರೂಪಾಯಿ ಸಂಗ್ರಹವಾಗಿದೆ.
ಈ ನಡುವೆ ಈ ರಿಯಾಯಿತಿ ಅವಧಿಯಲ್ಲಿ ದಂಡ ಕಟ್ಟಲು ನಾನಾ ರೀತಿಯ ಅಡಚಣೆ ಇತ್ತು. ಹಾಗಾಗಿ ಈ ಆಫರ್ ಮತ್ತಷ್ಟು ದಿನ ವಿಸ್ತರಿಸುವಂತೆ ಸಾರ್ವಜನಿಕರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.