ಬೆಂಗಳೂರು: ಜವರಾಯನ ಅಟ್ಟಹಾಸಕ್ಕೆ ನಲುಗಿದ್ದ ಹೆಣ್ಮಕ್ಕಳಿಬ್ಬರ ಪಾಲಿಗೆ ಆಪತ್ಬಾಂಧವನಾಗಿ ಜೀವ ಉಳಿಸಿದ ಖ್ಯಾತಿಗೆ ಕೆಎಸ್ಸಾರ್ಟಿಸಿ ಚಾಲಕ ಸಾಕ್ಷಿಯಾಗಿದ್ದಾರೆ. ಕಲ್ಪತರು ನಾಡು ತುಮಕೂರು ಜಿಲ್ಲೆ ಇಂಥದ್ದೊಂದು ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ.
ತುಮಕೂರು ಜಿಲ್ಲೆ ಶಿರಾ ಸಮೀಪ ಕೆರೆಯಲ್ಲಿ ಹೆಣ್ಮಕ್ಜಳಿಬ್ಬರು ಮುಳುಗಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದರು. ಅದೇ ಸಂದರ್ಭದಲ್ಲಿ ಸಮೀಪದಲ್ಲೇ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಆ ಬಸ್ಸಿನ ಚಾಲಕನ ಕಣ್ಣಿಗೆ ಅದ್ಹೇಗೆ ಈ ದುರ್ದೈವಿ ಹೆಣ್ನಕ್ಕಳ ಸ್ಥಿತಿ ಕಂಡಿತೋ ಗೊತ್ತಿಲ್ಲ. ಚಾಲಕ ಮಂಜುನಾಥ್ ಅವರು ಬಸ್ ನಿಲ್ಲಿಸಿ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.
ಇಂದು ಮಧ್ಯಾಹ್ನ 2.15ರ ಸುಮಾರಿಗೆ ಶಿರಾ ಸಮೀಪದ ಹಂದಿಕುಂಟೆ ಅಗ್ರಹಾರ ಕೆರೆಗೆ ಇಳಿದಿದ್ದ ಇಬ್ವರು ಹೆಣ್ಣು ಮಕ್ಕಳು ಮುಳುಗುತ್ತಿದ್ದರು. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಅದಾಗಲೇ ಅದೇ ಹೊತ್ತಿಗೆ ಕೆರೆ ಸಮೀಪವೇ ಶಿರಾ-ನಾಗಪ್ಪನಹಳ್ಳಿ ಗೇಟ್ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸುವ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಬಸ್ ಚಾಲಕ ಮಂಜುನಾಥ್ ಅದ್ಯಾಕೆ ಈ ಕೆರೆಯತ್ತ ನೋಡಿದರೋ ಗೊತ್ತಿಲ್ಲ. ಇಬ್ಬರು ಕೆರೆಯಲ್ಲಿ ಮುಳುಗುತ್ತಿದ್ದ ದೃಶ್ಯ ಕಂಡುಬಂತು. ಕೂಡಲೇ ಬಸ್ ನಿಲ್ಲಿಸಿದ ಚಾಲಕ ಮಂಜುನಾಥ್ ಏಕಾಏಕಿ ಕೆರೆಗೆ ಜಿಗಿದು ಸಾವಿನ ಸುಳಿಯಲ್ಲಿದ್ದ ಹರಣ್ಮಕ್ಕಳನ್ನು ಪಾರು ಮಾಡಲು ಪ್ರಯತ್ನ ಮಾಡಿದ್ದಾರೆ. ಕಾರ್ಯಾಚರಣೆ ವೇಳೆ ತಾನೂ ಮುಳುಗಿ ಸಾವನ್ಬಪ್ಪುವ ಸಂಧಿಕಾಲದಂತಿದ್ದರೂ ತನ್ನ ಪ್ರಾಣದ ಹಂಗು ತೊರೆದು ಆ ಹೆಣ್ಕಕ್ಕಳಿಬ್ವರನ್ನೂ ರಕ್ಷಿಸಿ ದಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಹಂದಿಕುಂಟೆ ಅಗ್ರಹಾರ ಕೆರೆಯ ಈ ಘಟನೆಗೆ ಬಸ್‌ನಲ್ಲಿದ್ದ ಪ್ರಯಾಣಿಕರು ಮೂಕ ಪ್ರೇಕ್ಷಕರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ರತ್ಯಕ್ಷದರ್ಶಿಗಳು ತಾನಾಯ್ತು, ತನ್ನ ಕೆಲಸವಾಯಿತು ಎಂದು ಚಾಲಕ ಮಂಜುನಾಥ್ ಮುನ್ನಡೆದಿದ್ದರೆ ಈ ಬಡಪಾಯಿ ಹೆಣ್ಮಕ್ಕಳ ಜೀವ ಉಳಿಯುತ್ತಿರಲಿಲ್ಲ. ಬಸ್ ಚಾಲಕ ನಿಜಕ್ಕೂ ಆಪತ್ಬಾಂಧವನಾಗಿದ್ದಾರೆ ಎಂದು ಕೊಂಡಾಡಿದ್ದಾರೆ.
ಪ್ರಾಣ ರಕ್ಷಕನಾದ ಚಾಲಕ ಮಂಜುನಾಥ್ ಅವರನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಅಭಿನಂದಿಸಿದ್ದಾರೆ.
ಚಾಲಕರ ಮಾನವೀಯ ಸಮಯೋಚಿತ ಕಾರ್ಯದಿಂದ ಎರಡು ಅತ್ಯಮೂಲ್ಯ ಜೀವ ಉಳಿದಿದ್ದು, ಇವರ ಮಾದರಿ ಕಾರ್ಯ ಅಪರೂಪದಲ್ಲಿ ಅಪರೂಪ ಎಂದು ಬಣ್ಣಿಸಿದ್ದಾರೆ. ನಮ್ಮ ಚಾಲನಾ ಸಿಬ್ಬಂದಿ ವರ್ಗದ ಈ ಕಾರ್ಯತತ್ಪರತೆಯು ಸಂಸ್ಥೆಯ ಹೆಮ್ಮೆ ಮತ್ತು ಗೌರವವಾಗಿದೆ ಎಂದಿರುವ ಅನ್ಬುಕುಮಾರ್, ಇಂತಹ ಸಿಬ್ಬಂದಿಯೇ ನಮ್ಮ ಆಸ್ತಿ ಎಂದು ಕೊಂಡಾಡಿದ್ದಾರೆ.