ಬೀಜಿಂಗ್: ಕೆಂಪು ನಾಡು ಚೀನಾದಲ್ಲಿ ಅಲ್ಲಿನ ಸರ್ಕಾರದ ವಿರುದ್ದ ನಾಗರಿಕರು ರೊಚ್ಚಿಗೆದ್ದಿದ್ದಾರೆ. ಕೊರೋನಾ ಸೋಂಕಿನ ಅಬ್ಬರ ಬೀಜಿಂಗ್ ಸಹಿತ ಹಲವು ಜಿಲ್ಲೆಗಳಲ್ಲಿ ಹೆಚ್ಚಾದ ಹಿನ್ನೆಲೆಯಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ನಾಗರಿಕರು ಹಿಂಸಾಚಾರದಲ್ಲಿ ತೊಡಗಿದ್ದಾರೆ.
Human’s crave freedom.
We must stand with the people of China. God bless them.pic.twitter.com/mM8uzcHg8V
— Collin Rugg (@CollinRugg) November 27, 2022
ಕೊರೊನಾ ಸೋಂಕಿನ ವಿರುದ್ಧ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನೇತೃತ್ವದ ಸರ್ಕಾರ ಜಾರಿಗೊಳಿಸಿರುವ ಕಠಿಣ ಪ್ರತಿಬಂಧಕ ಕ್ರಮಗಳ ವಿರುದ್ಧ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಶನಿವಾರದಿಂದೀಚೆಗೆ ಉಗ್ರ ಸ್ವರೂಪ ತಾಳಿದೆ. ಭಾನುವಾರದ ಪ್ರತಿಭಟನೆಯಂತೂ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ಪರಿಸ್ಥಿತಿ ನಿಯಂತ್ರಿಸಲು ಭದ್ರತಾ ಪಡೆ ಹರಸಾಹಸ ನಡೆಸಿತ್ತು.
Things are getting wild in China.
— ALX 🇺🇸 (@alx) November 27, 2022
ಕೊರೋನಾ ನಿಯಂತ್ರಣ ಸಂಬಂಧ ಹಲವಾರು ಕಂಟೈನರ್ಗಳನ್ನು ಬಳಸಿ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸೋಂಕಿತರನ್ನು ಈ ಕಂಟೈನರ್ಗಳಲ್ಲಿ ಬಂಧಿಸಿಡಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿದೆ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಾರ್ವಜನಿಕರ ನಡುವೆ ಹೊಡೆದಾಟ ಬಡಿದಾಟವೇ ನಡೆದಿದೆ.
Protests continue in China.
The situation now is impacting Chinese markets and appears to be very serious.https://t.co/2HShAxRuhA pic.twitter.com/q65EIMJ5ES
— Anton Gerashchenko (@Gerashchenko_en) November 28, 2022
ಈ ನಡುವೆ, ಕೊರೋನಾ ನಿಯಂತ್ರಣ ಸಂಬಂಧದ ನಿರ್ಬಂಧಗಳ ಜೊತೆಯಲ್ಲೇ ಅಲ್ಲಿನ ಸರ್ಕಾರದ ವಿರುದ್ದ ಘೋಷಣೆ ಕೂಗುವುದನ್ನೂ ಚೀನಾ ಸರ್ಕಾರ ನಿಷೇಧಿಸಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ನೇತೃತ್ವದ ಸರ್ಕಾರದ ಈ ಕ್ರಮದಿಂದಾಗಿ ನಾಗರಿಕರು ಮತ್ತಷ್ಟು ಕೆರಳಿದ್ದಾರೆ.























































