ತಿರುವನಂತಪುರಂ: ಕೇರಳದ ಮಹಿಳಾ ಐಎಎಸ್ ಅಧಿಕಾರಿ ಸಾರ್ವಜನಿಕ ಸಮಾರಂಭದಲ್ಲಿ ತನ್ನ ಮಗುವನ್ನು ಎತ್ತುಕೊಂಡು ಭಾಷಣ ಮಾಡಿದ ಸನ್ನಿವೇಶ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಪಟ್ಟಣಂತಿಟ್ಟ ಜಿಲ್ಲಾಧಿಕಾರಿ ದಿವ್ಯಾ ಎಸ್. ಅಯ್ಯರ್ ಅವರು ಖಾಸಗಿ ಸಂಸ್ಥೆಯೊಂದರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾಷಣ ಮಾಡಿದ್ದರು. ಈ ಕಾರ್ಯಕ್ರಮಕ್ಕೆ ಅವರು ತನ್ನ ಪುಟ್ಟ ಮಗುವಿನೊಂದಿಗೆ ತೆರಳಿದ್ದರು. ಗಣ್ಯರೊಂದಿಗೆ ವೇದಿಕೆ ಹಂಷಿಕೊಂಡಾಗಲೂ ಮಗುವನ್ನು ಜೊತೆಗೆ ಕೂರಿಸಿಕೊಂಡಿದ್ದರು. ಭಾಷಣ ಮಾಡುವಾಗಲೂ ಮಗುವನ್ನು ಎತ್ತಿಕೊಂಡಿದ್ದರು.
ತಮ್ಮ ಮೂರೂವರೆ ವರ್ಷದ ಮಗುವನ್ನು ಎತ್ತಿಕೊಂಡೇ ಅವರು ಭಾಷಣ ಮಾಡಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೋ ಬಗ್ಗೆ ಬಗೆಬಗೆಯ ಕಮೆಂಟ್ಗಳು ವ್ಯಕ್ತವಾಗಿದ್ದು, ಅದರ ಜೊತೆಯಲ್ಲೇ ಈ ಅಧಿಕಾರಿ ಈ ರೀತಿ ಭಾಷಣ ಮಾಡಿದ್ದು ಸರಿಯೇ ತಪ್ಪೇ ಎಂಬ ಚರ್ಚೆಯೂ ನಡೆದಿದೆ.
Kerala IAS Officer Carries Her Child In Arms During Speech, Sparks Debate https://t.co/BvHkiIgf9t pic.twitter.com/EG35Rcjq7C
— NDTV (@ndtv) November 4, 2022
























































