ಅಹ್ಮದಾಬಾದ್: ಗುಜರಾತ್‌ನ ಮೊರ್ಬಿಯಲ್ಲಿ ತೂಗು ಸೇತುವೆ ದುರಂತ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿತ್ತೆನ್ನಲಾದ ಮೊರ್ಬಿ ಬಳಿಯ ಈ ಸೇತುವೆ ಭಾನುವಾರ ಸಂಜೆ ಕುಸಿದು ಬಿದ್ದಿದ್ದು ದುರಂತದಲ್ಲಿ ಸತ್ತವರ ಸಂಖ್ಯೆ 132ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 170 ಮಂದಿಯನ್ನು ರಕ್ಷಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ.
In this video, clearly visible that bridge was overcrowded and a few people were playing with others' life by shaking it dangerously
— Vijay Patel🇮🇳 (@vijaygajera) October 30, 2022
ದುರಂತದ ಸಮಯದಲ್ಲಿ ಈ ಸೇತುವೆ ಮೇಲೆ ಸುಮಾರು 500 ಮಂದಿ ಈ ಸೇತುವೆ ಮೇಲೆ ಜಮಾಯಿಸಿದ್ದರೆನ್ನಲಾಗಿದೆ. ಪ್ರಸಿದ್ದ ಛತ್ ಪೂಜೆಯ ಕೈಂಕರ್ಯ ನಡೆಯುತ್ತಿದ್ದ ಸಂದರ್ಭವನ್ನು ಸೇತುವೆ ಮೇಲಿಂದ ಜನರು ಸಾಕ್ಷೀಕರಿಸುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದಿದೆ. ಬಹಳಷ್ಟು ಜನರು ನದಿಯಲ್ಲಿ ಮುಳುಗಿದ್ದರು. ಈಜು ತಜ್ಞರು ಹಲವರನ್ನು ರಕ್ಷಿಸಿದ್ದಾರೆ.
ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿದ್ದ ಈ ಕೇಬಲ್ ಬ್ರಿಡ್ಜ್ ಕೆಲಸಮಯದ ಹಿಂದಷ್ಟೇ ನವೀಕರಣಗೊಂಡು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆ ಸಂದರ್ಭದಲ್ಲಿ ಈ ಸೇತುವೆಯ ವೈಭವ ದೇಶವ್ಯಾಪಿ ಸುದ್ದಿಯಾಗಿತ್ತು. ಇದೀಗ ಭೀಕರ ದುರಂತದ ಮೂಲಕ 130ಕ್ಕೂ ಹೆಚ್ಚು ಜನರ ಸಾವಿನಿಂದಾಗಿ ಈ ಸೇತುವೆಯು ಸುದ್ದಿಯ ಕೇಂದ್ರಬಿಂದುವಾಗಿದೆ.























































