ಸ್ವಾರ್ಥ ರಹಿತ ‘ಸಾರ್ಥಕ ಸೇವಕರು’. ತಮ್ಮೂರ ಬಡವರಲ್ಲೇ ದೇವರನ್ನು ಕಾಣುವ ಆಸ್ತಿಕರು.. ಹೀಗೂ ಇದ್ದಾರೆ ಕರಾವಳಿಯ ಸಂಘದ ಸೇನಾನಿಗಳು..
ನವರಾತ್ರಿ ಹಬ್ಬದ ಸಂದರ್ಭದಲ್ಲಿ ಕರಾವಳಿ ಜನರಿಗೆ ಎಂದಿಲ್ಲದ ಸಡಗರ. ಹತ್ತಾರು ದುರ್ಗಾದೇಗುಲಗಳ ತಾಣವಾಗಿರುವ ದಕ್ಷಿಣಕನ್ನಡ-ಉಡುಪಿ ಜಿಲ್ಲೆಗಳಲ್ಲಂತೂ ನವರಾತ್ರಿ ಎಂದರೆ ಊರೆಲ್ಲಾ ಹಬ್ಬ ಸಂಭ್ರಮ. ಈ ಬಾರಿಯ ದಸರಾಗೆ ತೆರೆಬಿದ್ದಿದೆಯಾದರೂ ದಸರಾ ನಂತರದ ಸೇವಾ ಕೈಂಕರ್ಯಗಳು ಕೊನೆಗೊಂಡಿಲ್ಲ.
ಮಂಗಳೂರು ಸುತ್ತಮುತ್ತ ದಸರಾ ಎಂದರೆ ರಂಜನೆಯ ಹಬ್ಬ. ಈ ರಂಜನೆಯ ಸನ್ನಿವೇಶವೇ ಹಲವಾರು ಬಡ ಕುಟುಂಬಗಳಿಗೆ ಆದಾಯದ ಮೂಲವೂ ಹೌದು. ನವರಾತ್ರಿ ವೇಳೆ ವಿವಿಧ ವೇಷಗಳನ್ನು ಹಾಕಿ ಭಿಕ್ಷೆ ರೂಪದಲ್ಲಿ ಹಣ ಸಂಗ್ರಹಿಸುವುದೂ ಉಂಟು. ಇದನ್ನು ದುಡ್ಡಿನ ವಿಚಾರ ಅನ್ನುವುದಕ್ಕಿಂತಲೂ ಭಕ್ತಿಯ ಕೈಂಕರ್ಯ ಎನ್ನುತ್ತಾರೆ. ಈ ರೀತಿಯಲ್ಲಿ ಸಂಗ್ರಹವಾದ ಹಣವನ್ನು ಯುವಕರ ಸಮೂಹವೊಂದು ಬಡವರ ತುತ್ತಿನಚೀಲ ತುಂಬಿಸಲು ಕೊಡುಗೆಯಾಗಿ ಸಮರ್ಪಿಸಿದೆ. ಈ ಸನ್ನಿವೇಶಕ್ಕೆ ಬಂಟ್ವಾಳ ಸಮೀಪದ ತೆಂಕ ಬೆಳ್ಳೂರಿನ ಯುವಕರು ಸಾಕ್ಷಿಯಾಗಿದ್ದಾರೆ. ನವರಾತ್ರಿ ಸಂದರ್ಭದಲ್ಲಿ ಸಂಗ್ರಹವಾದ ಪೂರ್ತಿ ಹಣವನ್ನು ಬಡವರಿಗಾಗಿ ಸಮರ್ಪಿಸಿರುವ ಈ ಯುವಕರು ತಮ್ಮ ಜೊತೆಗಾರರಲ್ಲೇ ದೇವರನ್ನು ಕಂಡಿದ್ದಾರೆ.
ಏನಿದು ಕೈಂಕರ್ಯ?
ನವರಾತ್ರಿ ಎಂದರೆ ದುರ್ಗೆಯರ ಆರಾಧನಾ ಪರ್ವ. ‘ಆಸ್ತಿಕರು ಭಿಕ್ಷೆಯ ರೂಪದಲ್ಲಿ ಹಣ ಸಂಗ್ರಹಿಸಿ ದೇವರಿಗೆ ಅದನ್ನು ಸಮರ್ಪಿಸುವ ಹರಕೆಯ ಕೈಂಕರ್ಯ’ವು ಕರಾವಳಿಯಲ್ಲಿ ಸಾಮಾನ್ಯ. ಗತಕಾಲದಿಂದಲೂ ಈ ರೀತಿಯ ಸಂಪ್ರದಾಯ ಇಲ್ಲಿ ಕಂಡುಬರುತ್ತದೆ.
ದೇವರ ಅಥವಾ ಆದಿವಾಸಿಗಳ ವೇಷ ಧರಿಸಿ ಮನೆ ಮನೆಗಳಿಗೆ ತೆರಳಿ ಭಿಕ್ಷೆ ಸಂಗ್ರಹಿಸುವ ಮಂದಿ ಈ ಹಣವನ್ನು ಹತ್ತಿರದ ದೇವಾಲಯದ ಹುಂಡಿಗೆ ಹರಕೆ ರೂಪದಲ್ಲಿ ಸಮರ್ಪಿಸಿದಲ್ಲಿ ಬದುಕು ಪಾವನವಾಗುತ್ತದೆ ಎಂಬುದು ನಂಬಿಕೆ.
ನವರಾತ್ರಿ ವೇಷಗಳ ವಿಚಾರದಲ್ಲಿ ದೇಶದಲ್ಲೇ ಅನನ್ಯ ತಾಣ ಎಂಬಂತೆ ಗುರುತಾಗಿರುವ ಕರಾವಳಿಯಲ್ಲಿ ‘ಹುಲಿ ವೇಷ’, ಕರಡಿ ಕುಣಿತ, ‘ಶಾರ್ದೋಲ’ ಗಣಗಳ ಮೂಲಕ ಈ ವೇಷ ಪೂರ್ವಕ್ಕೂ ಶ್ರೀಮಂತಿಕೆಯ ಸ್ಪರ್ಷ ನೀಡಲಾಗಿದೆ. ಈ ಬಾರಿಯೂ ಹುಲಿ ವೇಷ, ಶಾರ್ದೋಲ ವೈಭವವು ದಸರಾದ ಶ್ರೀಮಂತಿಕೆಯನ್ನು ಹೆಚ್ಚಿಸಿದೆ.
ಈ ನಡುವೆ, ಬಂಟ್ವಾಳ ಸಮೀಪದ ತೆಂಕಬೆಳ್ಳೂರಿನ ಯುವಕರು ಈ ನವರಾತ್ರಿ ಕೈಂಕರ್ಯದಲ್ಲೂ ವಿಶೇಷತೆ ಮೆರೆದಿದ್ದಾರೆ. ವೇಷಧಾರಿ ಯುವಕರು ತಮಗೆ ಬಂದ ಹಣವನ್ನು ದೇವರ ಹುಂಡಿಗೆ ಹಾಕುವ ಬದಲು ತಮ್ಮೂರಿನ ಬಡಜನರಿಗೆ ಸಮರ್ಪಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಹುಲಿ ವೇಷ, ಶಾರ್ದೋಲ ವೇಷ ಧರಿಸಿ ಸಾರ್ಥಕತೆ ಮೆರೆದ ಶ್ರೀ ಕಾವೇಶ್ವರ ಫ್ರೆಂಡ್ಸ್ ತಂಡದ ಸದಸ್ಯರು ಇದೀಗ ನಾಡಿನ ಗಮನ ಸೆಳೆದಿದ್ದಾರೆ.
ತೆಂಕಬೆಳ್ಳೂರು, ಬಡಗ ಬೆಳ್ಳೂರು ಪರಿಸರದಲ್ಲಿ ಹಲವಾರು ವರ್ಷಗಳಿಂದ ಶಾರ್ದೋಲ ಸಹಿತ ವಿವಿಧ ವೇಷ ಧರಿಸಿದ ಈ ಯುವಕರ ತಂಡವು ನವರಾತ್ರಿ ಮುಗಿದ ಕೂಡಲೇ ಊರಿನ ಜನಮಾನ್ಯರ ಸೇವೆಗೆ ಸಮಯ ಕೊಟ್ಟಿದೆ. ನವರಾತ್ರಿ ವೇಷದಿಂದ ಗಳಿಸಿದ ಎಲ್ಲಾ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸದೆ ಊರಿನ ತೀರಾ ಬಡ ಕುಟುಂಬಗಳಿಗೆ ನೀಡಲಾಗಿದೆ. ಈ ಬಾರಿ ಹಲವಾರು ಕುಟುಂಬಗಳಿಗೆ ತಲಾ 30ಕೆಜಿ ಅಕ್ಕಿ ಹಾಗೂ ಅಗತ್ಯ ಪಡಿತರ ಮೂಲಕ ವಿತರಿಸಿದೆ. ಈ ಮೂಲಕ ತಮ್ಮ ಜೊತೆಗಾರರಲ್ಲೇ ದೇವರನ್ನು ಕಂಡಿದ್ದಾರೆ.

ಈ ಬೆಳ್ಳೂರು ಹುಡುಗರೇ ವಿಶೇಷ:
‘ಬೆಳ್ಳೂರು ಹುಡುಗರು’ ಒಂದಿಲ್ಲೊಂದು ವಿಷಯಗಳಿಂದಾಗಿ ಆಗಾಗ್ಗೆ ಗಮನಸೆಳೆಯುತ್ತಲೇ ಇರುತ್ತಾರೆ. ಸಂಘದ ಕಾರ್ಯಕರ್ತರೇ ಹೆಚ್ಚಿರುವ ಈ ಪ್ರದೇಶದ ಯುವಜನರು ಹಬ್ಬ ಹರಿದಿನಗಳಂದು ಸ್ಥಳೀಯ ಜನರ ಸಂಕಷ್ಟ ನಿವಾರಣೆಯ ಕಾರ್ಯಕ್ಕೆ ಮುಂದಾಗುತ್ತಾರೆ. ಸೂರಿಲ್ಲದವರಿಗೆ ಮನೆ ಕಟ್ಟಿಸಿಕೊಡುವುದು, ಹಳ್ಳಿ-ಕೇರಿಗಳಿಗೆ ಶ್ರಮಾಧಾನದ ಮೂಲಕ ತಾವೇ ರಸ್ತೆಗಳನ್ನು ನಿರ್ಮಿಸುವುದು, ಅನಾರೋಗ್ಯದಿಂದ ಬಳಲುತ್ತಿರುವವರತ್ತ ಸೇನಾನಿಗಳಂತೆ ಧಾವಿಸಿ ಸಹಾಯಹಸ್ತ ಚಾಚುವುದು.. ಹೀಗೆ ಈ ಬೆಳ್ಳೂರು ಹುಡುಗರ ಹತ್ತಾರು ಶ್ರಮ-ಸೇವೆಗಳು ಮಾಧ್ಯಮಗಳಲ್ಲೂ ಸುದ್ದಿಯಾಗುತ್ತಿರುತ್ತವೆ. ಇದೀಗ ಬಡವರಲ್ಲೇ ದೇವರನ್ನು ಕಾಣುವ ಈ ಯುವಕರ ಸೇವೆ ಮತ್ತೆ ಸುದ್ದಿಯಾಗಿದೆ.

ಈ ನಡುವೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಈ ಬಾರಿ ದಸರಾ ಸಂದರ್ಭದಲ್ಲಿ ಹುಲಿ ವೇಷಗಳ ವೈಭವ ಗಮನಸೆಳೆಯಿತು. ಮಂಗಳೂರಿನ ವಿವಿಧೆಡೆ ಹುಲಿವೇಷಗಳ ಸ್ಪರ್ದೆಯೂ ನಡೆದಿದೆ. ಮಂಗಳೂರು ಸುತ್ತಮುತ್ತಲ ಊರುಗಳ ಹುಲಿವೇಷ ತಂಡಗಳ ಪ್ರದರ್ಶನದ ಪೈಪೋಟಿ ಕೂಡಾ ಜನರ ರಂಜನೆಗೆ ಸಾಕ್ಷಿಯಾಯಿತು.

#pillinalike traditional #tigerdance #Mangalore #marnemi pic.twitter.com/l7whpoY6Za
— Süshmît@ Shetty🇮🇳 (@sussshhhh) October 5, 2022
Pili Nallike (Tiger Dance) performed during Dussera of Mangalore is a sight to watch and be in awe!
Just makes me wonder how many dance forms we Hindus have in praise of our Devis and Devtas. Just beautiful! 🙏🏼🙏🏼pic.twitter.com/s8kvn72VIQ— @pahadanldki_SK (@blackswanwins) October 5, 2022
https://twitter.com/amith007alankar/status/1577333655516565505?t=qDVLWZ2r5v3wPbcdzOjUoA&s=08
























































