ಬೆಅಮಗಳೂರು: ಆಹಾರ ಮತ್ತು ನಾಗರಿಕ ಪೂರೈಜೆ ಸಚಿವ ಉಮೇಶ್ ಕತ್ತಿ ನಿಧನಕ್ಕೆ ಗಣ್ಯರೇನಕರು ಶೋಕ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಉಮೇಶ್ ಕತ್ತಿ ಅಗಲುವಿಕೆ ಬಗ್ಗೆ ದುಃಖ ಹಂಚಿಕೊಂಡಿದ್ದಾರೆ.
Deeply saddened to hear about the passing of Food & Civil Supplies Minister Shri Umesh Katti.
My deepest condolences to the bereaved family. May his soul rest in peace. pic.twitter.com/r1MqujopIJ
— Siddaramaiah (@siddaramaiah) September 6, 2022
ರಾಜ್ಯ ಸಂಪುಟ ಸಚಿವ, ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ್ ಕತ್ತಿಯವರ ಅಕಾಲಿಕ ನಿಧನ ಆಘಾತವನ್ನುಂಟುಮಾಡಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಶ್ರೀಯುತರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ, ಅಭಿಮಾನಿ ವರ್ಗಕ್ಕೆ ಹಾಗು ಕಾರ್ಯಕರ್ತ ಬಂಧುಗಳಿಗೆ ನೀಡಲಿ ಎಂದು ಹಾಗು ಅವರಾತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸಿದ್ದಾರೆ.
ರಾಜ್ಯ ಸಂಪುಟಸಚಿವ, ಆಹಾರ ಮತ್ತು ಅರಣ್ಯ ಖಾತೆ ಸಚಿವ ಶ್ರೀ ಉಮೇಶ್ ಕತ್ತಿಯವರ ಅಕಾಲಿಕ ನಿಧನ ಆಘಾತವನ್ನುಂಟುಮಾಡಿದೆ. ಶ್ರೀಯುತರ ಅಗಲುವಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬ, ಅಭಿಮಾನಿ ವರ್ಗಕ್ಕೆ ಹಾಗು ಕಾರ್ಯಕರ್ತ ಬಂಧುಗಳಿಗೆ ನೀಡಲಿ ಎಂದು ಹಾಗು ಅವರಾತ್ಮಕ್ಕೇ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸೋಣ.#ಓಂಶಾಂತಿಃ pic.twitter.com/uSyrxPibXR
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) September 6, 2022
ಸ್ನೇಹಿತನ ನಿಧನದ ಸುದ್ದಿ ಬಗ್ಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕೂಡಾ ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ಆತ್ಮೀಯರಾದ ಶ್ರೀ ಉಮೇಶ್ ಕತ್ತಿ ಅವರು ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ ಎಂದಿರುವ ಶೆಟ್ಟರ್, ಭಗವಂತ ಅವರ ಅಗಲಿದ ಆತ್ಮಕ್ಕೆ ಚಿರಶಾಂತಿ ನೀಡಲಿ, ಅವರ ಕುಟುಂಬ ವರ್ಗಕ್ಕೆ ಮತ್ತು ಅವರ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದಯಪಾಲಿಸಲೆಂದು ಪ್ರಾರ್ಥಿಸಿದ್ದಾರೆ.
ಉಮೇಶ ಕತ್ತಿ ಅವರು ರಾಜ್ಯದ ರಾಜಕಾರಣದಲ್ಲಿ ತಮ್ಮ ಕ್ರಿಯಾಶೀಲತೆ, ನೇರ, ನಿಷ್ಠುರತೆಗೆ ಹೆಸರಾಗಿದ್ದರು.
ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು.
— Jagadish Shettar (Modi Ka Parivar) (@JagadishShettar) September 6, 2022
























































