ಮಂಗಳೂರು: ಮಣ್ಣಗುಡ್ಡೆಯಲ್ಲಿರುವ ಸಂಘನಿಕೇತನದಲ್ಲಿ ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ಆಶ್ರಯದಲ್ಲಿ ಈ ಬಾರಿ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಅಮೃತ ಮಹೋತ್ಸವ ಸಂಭ್ರಮ (75 ವರ್ಷ). ಈ ಹಿನ್ನೆಲೆಯಲ್ಲಿ ಬಂದರು ನಗರಿಯ ಈ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನೆರವೇರಲಿದೆ.

ಗಣೇಶ ವಿಗ್ರಹ ಪ್ರತಿಷ್ಠಾಪನೆಗೆ ಮುನ್ನ ವಿಗ್ರಹವನ್ನು ಮೆರವಣಿಗೆಯಲ್ಲಿ ತಂದ ಸನ್ನಿವೇಶವೂ ಗಮನಸೆಳೆಯುತು. ಶ್ರೀ ಮಹಾಗಣಪತಿ ದೇವರ ಮೃತಿಕಾ ವಿಗ್ರಹವನ್ನು ವಿಜೃಂಭಣೆಯಿಂದ ತರಲಾಯಿತು.
Mangalore Sanghanikethana Ganeshotsava Amrithmahotsava pic.twitter.com/9tWiCOyVHp
— jayaa (@unsocial2023) August 30, 2022
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರವೀಣ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಎಂ. ಸತೀಶ್ ಪ್ರಭು , ಸುರೇಶ ಕಾಮತ್ , ಉಪಾಧ್ಯಕ್ಷರಾದ ಜೆ . ಕೆ ರಾವ್ , ಆನಂದ ಪಾಂಗಳ, ಕೆ ಪಿ ಟೈಲಾರ್, ಅಭಿಷೇಕ್ ಭಂಡಾರಿ, ಕೇಶವ ಸ್ಮ್ರತಿ ಸಂವರ್ಧನ ಸಮಿತಿಯ ವಿನೋದ್ ಶೆಣೈ, ರಘುವೀರ್ ಕಾಮತ್, ಎಸ್.ಆರ್ ಕುಡ್ವ , ಗಣೇಶ್ ಪ್ರಸಾದ್, ಜಯಪ್ರಕಾಶ್ ಮಂಗಳಾದೇವಿ ಸ್ವಾಮಿಪ್ರಸಾದ್ ಮೊದಲಾದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮಂಗಳೂರು: ಸಂಘನಿಕೇತನ ಸಾರ್ವಜನಿಕ ಗಣೇಶೋತ್ಸವ, ಅಮೃತಮಹೋತ್ಸವ @friendsofrss @BJP4Karnataka #Ganeshotsav2022 pic.twitter.com/4JoSBiWRPn
— jayaa (@unsocial2023) August 30, 2022
ಧಾರ್ಮಿಕ, ಸಂಸ್ಕೃತಿಯ ಶಕ್ತಿ ನೆಲೆಯಂತಿರುವ ಸಂಘನಿಕೇತನವು ಈ ಬಾರಿ ಆಗಸ್ಟ್ 31ರಿಂದ ಸೆಪ್ಟೆಂಬರ್ 4ವರೆಗೆ ಗಣೇಶೋತ್ಸವ ವೈಭವಕ್ಕೆ ಸಾಕ್ಷಿಯಾಗಲಿದೆ. ಸಾರ್ವಜನಿಕ ಗಣೇಶೋತ್ಸವ ಕೈಂಕರ್ಯಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನನೀಯ ಸಹ ಸರಕಾರ್ಯವಾಹ ಶ್ರೀ ಮುಕುಂದ್‌ಜೀ ಅವರು ಚಾಲನೆ ನೀಡಲಿದ್ದಾರೆ. ಈ ಭಕ್ತಿ ಶ್ರದ್ದೆಯ ವೈದ್ದಿಕ ಕೈಂಕರ್ಯದ ಜೊತೆ ವಿವಿಧ ಧಾರ್ಮಿಕ, ಸಂಸ್ಕ್ರತಿಕ ಕಾರ್ಯಕ್ರಮಗಳೂ ಆಯೋಜಿತವಾಗಿವೆ.


























































