ಪಂಜಾಬ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಶಾಸನಸಭೆಯಲ್ಲಿ ಮಾರಾಮಾರಿ ನಡೆದಿದೆ.
This new wave of intolerance is damaging the social fabric of Pakistan. This can clearly be seen in Punjab Assembly. This must be stopped.
Embarrassing…
#PunjabAssembly #Punjab #Pakistan pic.twitter.com/F1sCpq1Vbo
— Developing Pakistan (@developingpak) April 16, 2022
ಪಂಜಾಬ್ ಪ್ರಾಂತ್ಯದ ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿ ಆಯ್ಕೆಯ ಕಸರತ್ತು ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಹಾಗೂ ಮುಸ್ಲಿಂ ಲೀಗ್ ಶಾಸಕರ ನಡುವೆ ಬೆಂಬಲ ಕುರಿತ ವಿಚಾರದಲ್ಲಿ ವಾಗ್ವಾದ ನಡೆದಿದೆ. ಈ ವಾಗ್ವಾದ ತಾರಕಕ್ಕೇರಿ ಮಾರಾಮಾರಿ ಹಂತ ತಲುಪಿದೆ. ಸಭಾಧ್ಯಕ್ಷರ ಪೀಠದಲ್ಲಿದ್ದ ಡೆಪ್ಯೂಟಿ ಸ್ಪೀಕರ್ ಮೇಲೆ ಶಾಸಕರ ಗುಂಪು ಮನಸೋ ಇಚ್ಚೆ ಥಳಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.