ಬೆಂಗಳೂರು: ಹಲವಾರು ಅಕ್ರಮ ಹಾಗೂ ಭ್ರಷ್ಟಾಚಾರ ಆರೋಪಗಳಿಗೆ ಗುರಿಯಾಗಿರುವ ರಾಜ್ಯ ಸರ್ಕಾರವನ್ನು ಇದೀಗ ಬಿಲ್ ಬಾಕಿ ಪ್ರಕರಣ ಮುಂದಿಟ್ಟು ಕಾಂಗ್ರೆಸ್ ಪೇಚಿಗೆ ಸಿಲುಕಿಸಿದೆ.
ಹಲವು ಕಾಮಗಾರಿಗಳ 75 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರ ಗುತ್ತಿಗೆದಾರರೊಂದಿಗೆ ಚೌಕಾಸಿ ವ್ಯವಹಾರಕ್ಕಿಳಿದಿದೆಯೇ!? ಎಂದು ಕಾಂಗ್ರೆಸ್ ಪಕ್ಷ ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನು ಪ್ರಶ್ನಿಸಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಎಅಮ ಬಸವರಾಜ್ ಬೊಮ್ಮಾಯಿ ಅವರ ಆರ್ಥಿಕ ಶಿಸ್ತು ಇದೇನಾ ಎಂದು ಗೇಲಿ ಮಾಡಿದೆ. ಬೋಗಸ್ ಬಜೆಟ್ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಬಿಜೆಪಿ ಸರ್ಕಾರ ಅಸಲಿಗೆ ಯೋಜನೆಗಳಿಗೆ, ಕಾಮಗಾರಿಗಳಿಗೆ ಹಣ ನೀಡುವ ಯೋಗ್ಯತೆಯನ್ನೇ ಉಳಿಸಿಕೊಂಡಿಲ್ಲ ಎಂದೂ ಟೀಕಾಸ್ತ್ರ ಪ್ರಯೋಗಿಸಿದೆ.
ಹಲವು ಕಾಮಗಾರಿಗಳ 75 ಸಾವಿರ ಕೋಟಿ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರ ಗುತ್ತಿಗೆದಾರರೊಂದಿಗೆ ಚೌಕಾಸಿ ವ್ಯವಹಾರಕ್ಕಿಳಿದಿದೆಯೇ!?@BSBommai ಅವರೇ, ಇದೇನಾ ನಿಮ್ಮ ಆರ್ಥಿಕ ಶಿಸ್ತು?
ಬೋಗಸ್ ಬಜೆಟ್ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಬಿಜೆಪಿ ಸರ್ಕಾರ ಅಸಲಿಗೆ ಯೋಜನೆಗಳಿಗೆ, ಕಾಮಗಾರಿಗಳಿಗೆ ಹಣ ನೀಡುವ ಯೋಗ್ಯತೆಯನ್ನೇ ಉಳಿಸಿಕೊಂಡಿಲ್ಲ. pic.twitter.com/EJNOSZiJNQ
— Karnataka Congress (@INCKarnataka) March 13, 2022