ತುಮಕೂರು: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ದ ಲಕ್ಷಾಂತರ ಜನರ ಮಾರಣ ಹೋಮಕ್ಕೆ ಸಾಕ್ಷಿಯಾಗುತ್ತಿದೆ. ಯುದ್ದವಾಗಿರಲಿ ಧರ್ಮಾಂದತೆಯಾಗಿರಲಿ ಎಂದಿಗೂ ಬೆಸೆಯುವ ಕೆಲಸ ಮಾಡುವುದಿಲ್ಲ. ಬದಲಿಗೆ ಸಂಘರ್ಷ. ಸಾಮ್ರಾಜ್ಯಶಾಹಿ ಮನಸ್ಸುಗಳಲ್ಲಿ ಸೌಹಾರ್ದತೆಯ ಅಶಾಕಿರಣ ಬರಬೇಕಿದೆ. ಯುದ್ದಕೋರ ನೀತಿಗಳನ್ನು ಖಂಡಿಸಿ, ಮುಂದಿನ ಪೀಳಿಗೆಗೆ ನೆಲ ಜಲ, ಪ್ರಾಣಿ ಪಕ್ಷಿ ಸಂಕುಲಗಳ ರಕ್ಷಣೆಗೆ ಮುಂದಾಗಬೇಕಿದೆ.
ಯುದ್ದಬೇಕಿಲ್ಲ – ಮಾನವಕುಲದ ರಕ್ಷಣೆಗೆ ನಾವು – ನೀವು. ಯುದ್ದ ಬೇಡ – ಶಾಂತಿ ಬೇಕು ಎನ್ನುವ ಮಂತ್ರವ ಸಾರಲು ಇಂದು ಜನಸ್ಪಂದನ ಟ್ರಸ್ಟ್ ಹಾಗು ತಿಪಟೂರಿನ ನಾಗರೀಕ ವೇದಿಕೆ ರೂಪಿಸಿದ್ದ ಕಾರ್ಯಕ್ರಮದಲ್ಲಿ ಸಮಾನ ಮನಸುಗಳೆಲ್ಲ ಕೂಡಿ ಶಾಂತಿ ಸಂದೇಶ ಸಾರಿದರು.
‘ವಿಶ್ವ ಶಾಂತಿಗಾಗಿ ನಾವು – ನೀವು’ ಕಾರ್ಯಕ್ರಮದಲ್ಲಿ ಜನಸ್ಪಂದನ ಟ್ರಸ್ಟ್ ನ ಸಿ.ಬೀ. ಶಶಿಧರ್, ದಲಿತ ಸಂಗರ್ಷ ಸಮಿತಿಯ ಕುಂದೂರು ತಿಮ್ಮಯ, ಹರೀಶ್ ಯಗಚಿಕಟ್ಟಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜು, ಸೈಯ್ಯದ್ ಸಾದತ್, ಸೌಹಾರ್ದ ವೇದಿಕೆಯ ಸೈಫುಲ್ಲಾ, ಶಮಿಊಲ್ಲಾ, ಶ್ರೀಹರ್ಷ, ರೈತ ಸಂಘದ ಬಸ್ಥಿಹಳ್ಳಿ ರಾಜಣ್ಣ, ಗಬಡ್ನಹಳ್ಳಿ ತಿಮ್ಮೇಗೌಡ, ನಾಗರೀಕ ವೇದಿಕೆಯ ಚಿದಾನಂದ ಮೂರ್ತಿ, ಶಿವಕುಮಾರ್, ಮತ್ತು ಇತರರು ಇದ್ದರು.