ಚಿಕ್ಕಮಗಳೂರು: ಬಿಜೆಪಿ ರಾಷ್ಟೀಯ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿಯವರ ತಂದೆ ತಿಮ್ಮೇಗೌಡ (92) ಅವರು ವಿಧಿವಶರಾಗಿದ್ದಾರೆ. ವಯೋಸಹಜ, ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಾನುವಾರ ಸ್ವಗ್ರಾಮ ಚಿಕ್ಕಮಾಗರವಳ್ಳಿಯಲ್ಲಿ ತಿಮ್ಮೇಗೌಡ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ತಿಮ್ಮೇಗೌಡ ಅವರು ಪತ್ನಿ ಹೊನ್ನಮ್ಮ, ಪುತ್ರರಾದ ಶಾಸಕ ಸಿ.ಟಿ. ರವಿ, ಸಿ.ಟಿ.ರಘು, ಪುತ್ರಿಯರಾದ ರೇಣುಕಾ, ರೋಹಿಣಿ, ರೇವತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ನನ್ನಾತ್ಮಬಲದ ಭಾಗವೊಂದು ಇಂದು ನನ್ನನ್ನಗಲಿದೆ.
ಮೊದಲ ಬಾರಿಗೆ ಅಪ್ಪನಿಲ್ಲದೆ ಲೋಕವನ್ನು ನಾನೆದುರಿಸಬೇಕಾಗಿದೆ.
ಓಂಶಾಂತಿ ಅಣ್ಣ.
— C T Ravi 🇮🇳 ಸಿ ಟಿ ರವಿ (Modi Ka Parivar) (@CTRavi_BJP) January 29, 2022
ಸಿ.ಟಿ.ರವಿ ತಂದೆಯ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ.ನಡ್ಡಾ ಸಹಿತ ಪಕ್ಷದ ಧುರೀಣರರು ಸಂತಾಪ ಸೂಚಿಸಿದ್ದಾರೆ.
My father, my biggest strength has left us today. A life without Him is unimaginable.
Om Shanti Anna 🙏 pic.twitter.com/0BmoawKRJk
— C T Ravi 🇮🇳 ಸಿ ಟಿ ರವಿ (@CTRavi_BJP) January 29, 2022