‘ಕರಾವಳಿ ಕಾಲೇಜು ಬಳಗ’ ಇದೀಗ ದೇಶದ ಗಮನಸೆಳೆದಿದೆ. ‘ಛಲ ಇದ್ದರೆ ಗೆಲುವು ಸನಿಹ’ ಎಂಬ ನಾಣ್ಣುಡಿಗೆ ರಾಜ್ಯದ ಶಿಕ್ಷಣ ತಜ್ಞ ಗಣೇಶ್ ರಾವ್ ಉದಾಹರಣೆಯಾಗಿದ್ದಾರೆ. ಅವರ ಮಹತ್ವಾಕಾಂಕ್ಷೆಯ ‘ಜಿ.ಆರ್.ಮೆಡಿಕಲ್ ಕಾಲೇಜ್’ಗೆ ಅನುಮತಿ ಸಿಗುವ ಮೂಲಕ ವಿದ್ಯಾರ್ಥಿಗಳ ಪಾಳಯದಲ್ಲೂ ಸಂತಸ ಮನೆಮಾಡಿದೆ.
ಮಂಗಳೂರು: ಶಿಕ್ಷಣ ತಜ್ಞ ಗಣೇಶ್ ರಾವ್ ಮುಖ್ಯಸ್ಥರಾಗಿರುವ ಕರಾವಳಿ ಕಾಲೇಜುಗಳ ಸಮೂಹವು, ಮಂಗಳೂರು ಹೊರವಲಯದ ನೀರುಮಾರ್ಗದಲ್ಲಿ ಜಿ.ಆರ್.ಮೆಡಿಕಲ್ ಕಾಲೇಜ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ (GR MEDICAL COLLEGE HOSPITAL AND RESEARCH CENTER ಆರಂಭಿಸಿದ್ದಾರೆ. ಇದಕ್ಕಾಗಿ ಹಲವು ದಿನಗಳಿಂದ ಎದುರುನೋಡುತ್ತಿದ್ದ ಅನುಮತಿಯು ಇದೀಗ ಕೈಸೇರಿದ್ದು ಕರಾವಳಿಯಲ್ಲಿ ಶಿಕ್ಷಣ ಪಡೆಯುವ ಆಕಾಂಕ್ಷಿಗಳಿಗೆ ಸದಾವಕಾಶ ಸಿಕ್ಕಿದೆ.
ಎಂಬಿಬಿಎಸ್ (MBBS) ಕೋರ್ಸ್ ಆರಂಭಕ್ಕಾಗಿ ನ್ಯಾಷನಲ್ ಮೆಡಿಕಲ್ ಕಮಿಷನ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ನಿಯಮಾವಳಿಗಳ ಪ್ರಕಾರ ಎಲ್ಲಾ ಸೌಲಭ್ಯಗಳನ್ನು ಈ ಮೆಡಿಕಲ್ ಕಾಲೇಜಿನಲ್ಲಿ ವ್ಯವಸ್ಥೆಗೊಳಿಸಲಾಗಿದೆ.
- MBBSಗಾಗಿ ಅತ್ಯಾಧುನಿಕ 330 ಬೆಡ್‌ಗಳನ್ನು ಹಾಗೂ 30 ಎಮರ್ಜೆನ್ಸಿ ವೆಂಟಿಲೇಟರ್ ಸಹಿತ ಸೌಲಭ್ಯಗಳನ್ನು ವ್ಯವಸ್ಥೆಗೊಳಿಸಲಾಗಿದೆ.
- ಹಸಿರು ವಿಭಾಗ, ಹಳದಿ ವಿಭಾಗ ಮತ್ತು ಕೆಂಪು ವಿಭಾಗಗಳು ಹಾಗೂ ಐಸಿಯು, ಐಸಿಯು ಐಸಿಯು, ಐಸಿಸಿಯು, ಎನ್‌ಐಸಿಯು, ಪಿಐಸಿಯು, ಒಬ್‌ಸ್ಪೇಟಿಕ್ ಹೆಚ್‌ಡಿಯು ಐಸಿಯುಗಳ 60 ಬೆಡ್‌ಗಳನ್ನು ಈ ಸುಸಜ್ಜಿತ GR MEDICAL COLLEGE HOSPITAL AND RESEARCH CENTER ಹೊಂದಿದ್ದು ಹೆಚ್ಚಿನ ಸೌಲಭ್ಯಗಳನ್ನು ಹೊಂದಿರುವ ಹೆಗ್ಗಳಿಕೆಗೂ ಪಾತ್ರವಾಗಿದೆ.
- ಪ್ರಿ-ಆಪರೇಟಿವ್ ಬೆಡ್ಸ್, ಪೋಸ್ಟ್ ಆಪರೇಟಿವ್ ಬೆಡ್ಸ್, ಲೇಬರ್ ಬೆಡ್ಸ್, ಎಕ್ಲಂಶೀಯ ಬೆಡ್ಸ್, ಸೆಪ್ಟಿಕ್ ಬೆಡ್‌ಗಳನ್ನೂ ಹೊಂದಿದೆ.
- ಸುಮಾರು 418 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ ಎಂದೂ ಗುರುತಾಗಿದೆ.
- ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒಳಗೊಂಡ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಕೂಡ ಇದೇ ಕ್ಯಾಂಪಸ್‌ನಲ್ಲಿ ಇದೆ. ಹಾಗಾಗಿ ಈ ಮೆಡಿಕಲ್ ಕಾಲೇಜು ದೇಶದ ಗಮನಸೆಳೆದಿದೆ.
- ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಬೇಕಾಗಿರುವ ಕ್ಲಿನಿಕಲ್ ಲ್ಯಾಬ್‌ಗಳಾದ ಅನಾಟಮಿ, ಫಿಜಿಯಾಲಜಿ, ಬಯೋ ಕೆಮಿಸ್ಟ್ರಿ ಲ್ಯಾಬ್‌ಗಳನ್ನು ಹೊಂದಿದೆ.
- ದಿನದ 24 ಗಂಟೆಯೂ ತುರ್ತು ಚಿಕಿತ್ಸೆ, ಬ್ಲಡ್ ಬ್ಯಾಂಕ್, ಆಪರೇಷನ್ ಥಿಯೇಟರ್, ಮೆಡಿಕಲ್ ಸ್ಟೋರ್ಸ್, ಆಂಬುಲೆನ್ಸ್ ಸೇವೆ ಲಭ್ಯವಿದೆ.
ಈ ಎಲ್ಲಾ ಹೈಟೆಕ್ ಸೌಲಭ್ಯ ನಿರ್ವಹಿಸಲು ಸಮರ್ಥ ವೈದ್ಯರ ತಂಡವನ್ನು ಗಣೇಶ್ ರಾವ್ ಸಜ್ಜುಗೊಳಿಸಿದ್ದಾರೆ. ಈ ಸೌಲಭ್ಯಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿರುವ ಸಕ್ಷಮ ಪ್ರಾಧಿಕಾರವು ಈ ವರ್ಷದಿಂದಲೇ MBBS ಕೋರ್ಸ್ ಆರಂಭಕ್ಕೆ ಅಸ್ತು ಎಂದಿದೆ.
ಪ್ರಸ್ತುತ, ಜಿ.ಆರ್. ಮೆಡಿಕಲ್ ಕಾಲೇಜು ಕರ್ನಾಟಕದಲ್ಲಿ ನ್ಯಾಷನಲ್ ಮೆಡಿಕಲ್ ಕಮಿಷನ್‌ನ ಅನುಮತಿಯೊಂದಿಗೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ ಸ್ಥಾಪನೆಯಾಗಿರುವ ಮೊದಲ ಖಾಸಗಿ ವೈದ್ಯಕೀಯ ಕಾಲೇಜು ಎಂಬ ಹೆಗ್ಗಳಿಕೆಗೂ ಆರಂಭವಾಗುತ್ತಿರುವ ಏಕೈಕ ಮೆಡಿಕಲ್ ಕಾಲೇಜು ಪಾತ್ರವಾಗಿದೆ.
ಬೆಂಗಳೂರಿನ ಯಲಹಂಕದಲ್ಲಿ ಆಯುರ್ವೇದಿಕ್ ಕಾಲೇಜನ್ನು ಹೊಂದಿರುವ ಗಣೇಶ್ ರಾವ್ ಮುಂದಾಳುತ್ವದ ಕರಾವಳಿ ಸಮೂಹ ಶಿಕ್ಷಣ ಸಂಸ್ಥೆಯು ಇದೀಗ ಕರಾವಳಿಯಲ್ಲಿ ಸುಸಜ್ಜಿತ ಮೆಡಿಕಲ್ ಕಾಲೇಜನ್ನೂ ಹೊಂದುವ ಮೂಲಕ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಒದಗಿಸುವಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.
ಇಂಜಿನಿಯರಿಂಗ್ ಶಿಕ್ಷಣ, ಫಾರ್ಮಸಿ ಶಿಕ್ಷಣ, ಫ್ಯಾಷನ್ ಟೆಕ್ನಾಲಜಿ ಸಹಿತ ವಿವಿಧ ಕ್ಷೇತ್ರಗಳಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ಸೂಕ್ತ ಶಿಕ್ಷಣ ಕಲ್ಪಿಸುತ್ತಿರುವ ಗಣೇಶ್ ರಾವ್ ಸಾರಥ್ಯದ ‘ಕರಾವಳಿ ಕಾಲೇಜ್’, ಇದೀಗ ನೂರಾರು ಕೋಟಿ ರುಪಾಯಿ ವೆಚ್ಚದಲ್ಲಿ ಪ್ರತಿಷ್ಠಿತ ಮೆಡಿಕಲ್ ಕಾಲೇಜ್ ಜೊತೆಗೆ ಆಸ್ಪತ್ರೆಯನ್ನೂ ನಿರ್ಮಿಸಿದೆ. ಈ ಮೂಲಕ ಮಧ್ಯಮವರ್ಗದ ಜನರಿಗೂ ಸೂಕ್ತ ವೈದ್ಯಕೀಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹ ಬೆಳವಣಿಗೆ.