ತೀರ್ಥಹಳ್ಳಿ, : ರೈತರು ಎದುರಿಸುತ್ತಿರುವ, ಅಡಕೆ ಕೊನೆ ತೆಗೆಯುವ ಸಮಸ್ಯೆಗೆ, ಕಾರ್ಬನ್ ಫೈಬರ್ ದೋಟಿ ವರವಾಗಲಿದೆ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಕೃಷಿಮಲೆನಾಡು ಕೃಷಿಕರ ಸಮುದಾಯ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ, ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ,
ಆಯೋಜಿಸಿದ್ದ, ಕಾರ್ಬನ್ ಫೈಬರ್ ದೋಟಿಯಲ್ಲಿ ಕೊನೆ ತೆಗೆಯುವ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಬದುಕನ್ನು ಸಹನೀಯ ಗೊಳಿಸಲು, ಹಲವಾರು ವ್ಯಕ್ತಿಗಳು ಹಾಗೂ ಸಂಸ್ಥೆಗಳು, ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ, ರೈತರು, ಇತ್ತೀಚಿನ ದಿನಗಳಲ್ಲಿ, ಅಡಿಕೆ ಕೊನೆ ತೆಗೆಯುವ ವಿಚಾರದಲ್ಲಿ, ಬಹಳವಾಗಿ, ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೊನೆ ತೆಗೆಯುವ ಕಾಯಕದಲ್ಲಿ, ಹಲವಾರು ಕಾರ್ಮಿಕರೂ ಆಕಸ್ಮಿಕ ವಾಗಿ, ಮೇಲಿನಿಂದ ಬಿದ್ದು, ಅಮೂಲ್ಯ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆಲ್ಲಾ ವರದಾನ ವೆಂಬಂತೆ, ಅತ್ಯಂತ ಹಗುರವಾದ ಹಾಗೂ ಬಹಳವಾಗಿ ಉಪಯೋಗವಾಗುವ ಹಾಗೂ ನೆರವಾಗುವ ಕಾರ್ಬನ್ ಧೋಟಿ ಯ ಆವಿಷ್ಕಾರ, ಆಗಿದೆ, ಎಂದರು.
ಸಾಮಾನ್ಯ ರೈತರೂ ಈ ವಿನೂತನ ದೋಟಿಯನ್ನು ಪಡೆದುಕೊಳ್ಳಲು ಅನುಕೂಲವಾಗುವಂತೆ, ಕೃಷಿ ಹಾಗೂ ತೋಟಗಾರಿಕೆ ಇಲಾಖಯಿಂದ ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ವ್ಯವಸ್ಥೆ, ಮಾಡಲಾಗುವುದು ಎಂದೂ ಸಚಿವರು ತಿಳಿಸಿದರು.
ಅಡಕೆಯಿಂದ ಹತ್ತು ಹಲವು ಇತರ ಉತ್ಪನ್ನಗಳು ಹೊರ ಬರುತ್ತಿವೆ, ಇದೊಂದು ಅತ್ಯಂತ ಸಂತೋಷದಾಯಕ ವಿಚಾರವಾಗಿದೆ ಎಂದು ಆರಗ ಜ್ಞಾನೇಂದ್ರ ತಿಳಿಸಿದರು.
ಕೂಳೂರು ಸತ್ಯನಾರಾಯಣ್ ರಾವ್, ಖ್ಯಾತ ಸಾಹಿತಿ ಮತ್ತು ಛಾಾಚಿತ್ರಗ್ರಾಹಕ ಶ್ರೀ ಪಡ್ರೆ, ಡಾ. ರವಿಕುಮಾರ್ ಸಹಿತ ಅನೇಕ ಗಣ್ಯರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.