ಮಂಗಳೂರು: ವಿಮಾನಗಳಲ್ಲಿ ಪ್ರಯಾಣ ಆರಂಭದ ವೇಳೆ ಹಿಂದಿ-ಇಂಗ್ಲೀಷ್ ಭಾಷೆಗಳಲ್ಲಿ ಅನೌನ್ಸ್‌ಮೆಂಟ್ ಸಾಮಾನ್ಯ. ಈ ವರೆಗೂ ಪ್ರಾದೇಶಿಕ ಭಾಷೆಗಳಲ್ಲಿ ಈ ರೀತಿಯ ಸಂವಹನ ನಡೆದಿಲ್ಲ. ಇದೀಗ ಈ ಅವಕಾಶ ತುಳು ಭಾಷೆಗೆ ಸಿಕ್ಕಿದೆಯೇ ಎಂಬ ಚರ್ಚೆ ಶುರುವಾಗಿದೆ. ತುಳುನಾಡಿನ ಮಂದಿಯನ್ನು ಈ ಸನ್ನಿವೇಶ ಪುಳಕಗೊಳಿಸಿದೆ.
https://youtu.be/zstuN2PWQs8
ಮಹಾರಾಷ್ಟ್ರದ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ವಿಮಾನದಲ್ಲಿ ತುಳು ಭಾಷೆ ಮೂಲಕ ಪ್ರಯಾಣಿಕರಿಗೆ ಸೂಚನೆ ಕೊಟ್ಟ ವೀಡಿಯೋ ಇದೀಗ ವೈರಲ್ ಆಗಿದೆ. ಡಿ.24ರಂದು ಮುಂಬೈನಿಂದ ಮಂಗಳೂರಿಗೆ ಹೊರಟ ‘ಇಂಡಿಗೋ’ ವಿಮಾನದಲ್ಲಿ ಉಡುಪಿ ಮೂಲದ ಪೈಲೆಟ್ ಪ್ರದೀಪ್ ಕುಮಾರ್ ಪದ್ಮಶಾಲಿ ಎಂಬವರು ತುಳು ಭಾಷೆಯಲ್ಲಿ ಪ್ರಯಾಣಿಕರಿಗೆ ಮಾರ್ಗದರ್ಶನ ಮಾಡಿ ಶುಭ ಹಾರೈಸಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.