ಬೆಂಗಳೂರು: ಶಿಕ್ಷಣವನ್ನು ಕೇಸರೀಕರಣ ಮಾಡಲಾಗುತ್ತದೆ ಎಂಬ ಆರೋಪ ಬಹುಕಾಲದಿಂದಲೂ ಕೇಳಿ ಬರುತ್ತಿತ್ತು. ಆದರೆ ಪೊಲೀಸ ಠಾಣೆಯು ಕೇಸರೀಕರಣವಾಗಿದೆ. ಇಂಥದ್ದೊಂದು ಆರೋಪ ಕಾಂಗ್ರೆಸ್‌ನದ್ದು.
ಆಯುಧ ಪೂಜೆಯ ದಿನದಂದು ವಿಜಯಪುರ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ಪೊಲೀಸ್ ಸಿಬ್ಬಂದಿ ಕೇಸರಿ ಶಾಲು ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಬೆಳವಣಿಗೆ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಶ್ವೇತ ವಸ್ತ್ರ ಧರಿಸಿ ಕೇಸರಿ ಶಾಲನ್ನು ಹೆಗಲೇರಿಸಿಕೊಂಡಿದ್ದರು. ಇನ್ನೊಂದೆಡೆ ಉಡುಪಿ ಜಿಲ್ಲೆ ಕಾಪು ಬಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಕೇಸರಿ ಬಣ್ಣದ ಅಂಗಿಧರಿಸಿ, ಮಹಿಳಾ ಪೊಲೀಸರು ಕೇಸರಿ ವರ್ಣದ ಸೀರೆ ತೊಟ್ಟು ಗಮನಸೆಳೆದಿದ್ದರು.
ಪೊಲೀಸರರ ಈ ನಡೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್ ಮಾಡಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸರ ನಡೆಗೂ ಭಜರಂಗದಳದ ವೈಖರಿಗೂ ಅವರು ತುಲನೆಮಾಡಿ ಬಿಜೆಪಿಯ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪೊಲೀಸರ ದಿರಿಸು ಮಾತ್ರ ಯಾಕೆ ಬದಲಾಯಿಸಿದಿರಿ @CMofKarnataka?
ಅವರ ಕೈಗೆ ತ್ರಿಶೂಲಗಳನ್ನೂ
ಕೊಟ್ಟು
ಹಿಂಸೆಯ
ದೀಕ್ಷೆ ಕೊಟ್ಟು ಬಿಡಿ.ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ ಕನಸು ನನಸಾಗಬಹುದು.
1/4 pic.twitter.com/jNtFADb8Rc— Siddaramaiah (@siddaramaiah) October 17, 2021
ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ ಪೊಲೀಸ್‌ಗಿರಿಯ ದೌರ್ಜನ್ಯ ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ. ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ. ಇದಕ್ಕೆಲ್ಲ ಸಿಎಂ ಬಸವರಾಜ್ ಬೊಮ್ಮಾಯಿ ಬಹಿರಂಗ ಬೆಂಬಲ.. ರಾಜ್ಯದಲ್ಲಿ ಸರ್ಕಾರ ಇದೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಗೂಂಡಾಗಿರಿಯನ್ನು ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ. ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಕ್ಷೇಮಕರ ಎಂದವರು ಟೀಕಿಸಿದ್ದಾರೆ.
ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಯೋಗಿ ಆದಿತ್ಯನಾಥ್ ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ. ಸಿಎಂ ಬಸವರಾಜ್ ಬೊಮ್ಮಾಯಿ ಅವರೇ, ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕದ
ಜನಪರವಾದ ಉತ್ತಮ
ಆಡಳಿತಕ್ಕೆ ಒಂದು
ಗೌರವದ ಪರಂಪರೆ ಇದೆ.ಇದು @myogiadityanath ಅವರ ಉತ್ತರಪ್ರದೇಶದ ಜಂಗಲ್ ರಾಜ್ ಅಲ್ಲ.
@BSBommai ಅವರೇ,
ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು
ಪ್ರಜಾಪ್ರಭುತ್ವ ಉಳಿಸಿ.
4/4 pic.twitter.com/MhyU9Bn1T4— Siddaramaiah (@siddaramaiah) October 17, 2021
ಕಾಂಗ್ರೆಸ್ ಟೀಕೆಗೆ ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿರುವ ಬಿಜೆಪಿ, ಪೊಲೀಸರ ನಡೆಯನ್ನು ಸಮರ್ಥಿಸಿದೆ.
ಶ್ವೇತ ವರ್ಣದ ಧಿರಿಸು, ಅದಕ್ಕೊಂದು ಕೇಸರಿ ಬಣ್ಣದ ಶಲ್ಯ, ತಲೆಗೊಂದು ಗಾಂಧಿ ಟೋಪಿ. ಮಾನ್ಯ ಸಿದ್ದರಾಮಯ್ಯ ಅವರೇ, ಇದು ನಿಮಗೆ ಜಂಗಲ್ ರಾಜ್, ಕೋಮುವಾದ ಅನಿಸಿದರೆ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಅದು ಮನೋರೋಗವಾಗಿರಬಹುದು. ನಿಮ್ಮ ರಾಜಕೀಯ ಚಪಲಕ್ಕೆ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡಿ ಪೊಲೀಸರನ್ನು ಅವಮಾನಿಸಬೇಡಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.
ಶ್ವೇತ ವರ್ಣದ ಧಿರಿಸು, ಅದಕ್ಕೊಂದು ಕೇಸರಿ ಬಣ್ಣದ ಶಲ್ಯ, ತಲೆಗೊಂದು ಗಾಂಧಿ ಟೋಪಿ.
ಮಾನ್ಯ @siddaramaiah ಅವರೇ, ಇದು ನಿಮಗೆ ಜಂಗಲ್ ರಾಜ್, ಕೋಮುವಾದ ಅನಿಸಿದರೆ ದಯವಿಟ್ಟು ವೈದ್ಯರನ್ನು ಸಂಪರ್ಕಿಸಿ. ಅದು ಮನೋರೋಗವಾಗಿರಬಹುದು.
ನಿಮ್ಮ ರಾಜಕೀಯ ಚಪಲಕ್ಕೆ ಎಲ್ಲವನ್ನೂ ಕಾಮಾಲೆ ಕಣ್ಣಿನಿಂದ ನೋಡಿ ಪೊಲೀಸರನ್ನು ಅವಮಾನಿಸಬೇಡಿ. pic.twitter.com/lA400d2rQ9
— BJP Karnataka (@BJP4Karnataka) October 17, 2021
ಈ ನಡುವೆ ಪೊಲೀಸರ ನಡೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಬೇರೆಯೇ ರೀತಿ ಅಭಿಪ್ರಾಯ ವ್ಯಕ್ತವಾಗಿದೆ. ರಾಜ್ಯದ ಬಹುತೇಕ ಪೊಲೀಸ್ ಠಾಣೆಗಳಲ್ಲಿ ಗುಡಿಗಳೇ ಇವೆ. ಅನಾದಿಕಾಲದಿಂದಲೂ ಆಯುಧ ಪೂಜೆ ಹಾಗೂ ಇನ್ನಿತರ ಪೂಜೆಗಳೂ ನಡೆಯುತ್ತಾ ಬಂದಿವೆ. ಈ ಪೂಜೆಯನ್ನು ಕೇಸರೀಕರಣ ಎನ್ನುವುದು ಸರಿಯಲ್ಲ ಎಂಬುದು ಅನೇಕರ ಪ್ರತಿಕ್ರಿಯೆ.