ಮಂಗಳೂರು: ಆಗಾಗ್ಗೆ ಅಪರಾಧ ಪ್ರಕರಣಗಳಲ್ಲಿ ಸುದ್ದಿಯಲ್ಲಿರುವ ಬಂದರು ನಗರಿ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬನ ಮೇಲೆ ಚೂರಿ ಇರಿತದ ಘಟನೆ ನಡೆದಿದೆ.
ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಲೆಮಾರ್ ಎಂಬಲ್ಲಿ ಯುವಕರ ಗುಂಪು ಈ ಕೃತ್ಯ ನಡೆಸಿದೆ. ಬುಧವಾರ ತಡರಾತ್ರಿ
ಪಂಜಿಮೊಗರು ಎಂಬಲ್ಲಿನ ನಿವಾಸಿ ರಾಜೇಶ್ (45) ಎಂಬವರು ಕೆಲಸ ಮುಗಿಸಿ ತೆರಳುತ್ತಿದ್ದಾಗ ಅಪರಿಚಿತರ ಗುಂಪು ಚೂರಿಯಿಂದ ಇರಿದು ಪರಾರಿಯಾಗಿದೆ.
ಗಂಭೀರವಾಗಿ ಗಾಯಗೊಂಡ ರಾಜೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ಏನಿರಬಹುದು ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಡಿದ್ದಾರೆ.