ಕಲಬುರಗಿ: ಕಲ್ಯಾಣ ಕರ್ನಾಟಕದ ಕೈ ನಾಯಕರ ಕನಸುಗಳು ಚಿಗುರಿದೆ. ಪ್ರತಿಷ್ಠೆಯ ಅಖಾಡವೆನಿಸಿರುವ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.
ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಪಾಲಿಕೆಗಳು ಬಿಜೆಪಿ ಪರಾಕ್ರಮಕ್ಕೆ ಸಾಕ್ಷಿಯಾದರೆ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಾಬಲ್ಯದ ನಾಡು ಕಲಬುರಗಿಯಲ್ಲಿ ಕಾಂಗ್ರೆಸ್ ಪಕ್ಷ ಪಾರುಪಥ್ಯ ಮೆರೆದಿದೆ.
ಚುನಾವಣಾ ಮತ ಎಣಿಕೆ ಬಿರುಸಿನಿಂದ ಸಾಗಿದ್ದು, 58 ಸದಸ್ಯ ಬಲದ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ 26 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, 24 ಸ್ಥಾನಗಳು ಕಮಲದ ಹಿಡಿತದಲ್ಲಿದೆ. 3ಕಡೆ ಜೆಡಿಎಸ್ ಪ್ರಾಬಲ್ಯ ಗೊತ್ತಾಗಿದೆ. ಒಂದು ಸ್ಥಾನ ಪಕ್ಷೇತರ ಪಾಲಾಗಿದೆ