ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಮರ್ಥ ಪೊಲೀಸರಿಗೆ ಪದಕಗಳನ್ನು ನೀಡಿ ಗೌರವಿಸುವುದು ರಾಷ್ಟ್ರ ಸೇವಾ ಕೈಂಕರ್ಯ. ಈ ಬಾರಿಯೂ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೆಎಸ್‌ಪಿಎಸ್ ಅಧಿಕಾರಿ ಪರಮೇಶ್ವರ್ ಹೆಗಡೆ ಸಹಿತ ನಾಲ್ಚರಿಗೆ ರಾಷ್ಟ್ರೀಯ ಪದಕ ಸಿಕ್ಕಿದೆ.
ಅತ್ಯುತ್ತಮ ತನಿಖೆಗಾಗಿ ನೀಡುವ ಕೇಂದ್ರ ಗೃಹ ಸಚಿವರ ಪದಕಕ್ಕೆ ಮಂಗಳೂರು ನಗರ ಸಹಾಯಕ ಪೊಲೀಸ್ ಆಯುಕ್ತ ಪರಮೇಶ್ವರ್ ಅನಂತ್ ಹೆಗಡೆ, ಬೆಂಗಳೂರು ಸಿಸಿಬಿಯ ಎಸಿಪಿ ಹೆಚ್.ಎನ್.ಧರ್ಮೇಂದ್ರ, ಬಿಡಿಎ ವಿಶೇಷ ಕಾರ್ಯಪಡೆಯ ಡಿವೈಎಸ್ಪಿ ಬಾಲಕೃಷ್ಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಎಸ್‌ಐಟಿ ಇನ್‌ಸ್ಪೆಕ್ಟರ್ ಮನೋಜ್ ಎನ್ ಹೋವಲೆ, ದಾವಣಗೆರೆ ಜಿಲ್ಲೆ ಹೊನ್ನಾಳಿ ಠಾಣೆಯ ಇನ್‌ಸ್ಪೆಕ್ಟರ್ ದೇವರಾಜ್ ಟಿ.ವಿ. ಹಾಗೂ ಹಳೇ ಹುಬ್ವಳ್ಳಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಶಿವಪ್ಪ ಎಸ್ ಕಮಟಗಿ ಅವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಯಾರಿವರು ಪಿ.ಎ.ಹೆಗಡೆ..?

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಡಕ್ ಅಧಿಕಾರಿ ಎಂಬ ಖ್ಯಾತಿಗೊಳಗಾಗಿರುವ ಪರಮೇಶ್ವರ್ ಹೆಗಡೆ ಅವರು ಪಿ.ಎ.ಹೆಗಡೆ ಎಂದೇ ಗುರುತಾಗಿದ್ದಾರೆ. ನಿಷ್ಟೂರ ತನಿಖೆ, ಎನ್‌ಕೌಂಟರ್, ಎಕನಾಮಿಕ್ ಅಫೆನ್ಸ್ ತನಿಖೆ ಹೀಗೆ..