ಉಡುಪಿ: ಜುಲೈ 17 ರಂದು ಉಡುಪಿ ನಗರದಲ್ಲಿ ಅಶೋಕ್ ಕುಮಾರ್ ಎಂಬವರನ್ನು ಅಪಹರಿಸಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೋಷ, ಅನಿಲ್ ಪೂಜಾರಿ ಮತ್ತು ಮಣಿಕಂಠ ಖಾರ್ವಿ ಬಂಧಿತರು. ಇವರನ್ನು ಕಟಪಾಡಿ ಜಂಕ್ಷನ್ ಬಳಿ ವಶಕ್ಕೆ ಪಡೆದ ಪೊಲೀಸರು, ಕೃತ್ಯಕ್ಕೆ ಬಳಸಿದ ಪಿಸ್ತೂಲ್, ತಲವಾರುಗಳು ಹಾಗೂ ದೂರುದಾರ ಅಶೋಕ್ ಕುಮಾರ್ ರಿಂದ ಸುಲಿಗೆ ಮಾಡಿದ 1,35,000 ರೂ ನಗದು ಹಾಗೂ ಮೊಬೈಲ್ ನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಮೇಲೆ ಕಾಪು, ಕಾರ್ಕಳ ಗ್ರಾಮಾಂತರ, ಸುಬ್ರಮಣ್ಯ ಠಾಣೆಗಳಲ್ಲೂ ಪ್ರಕರಣಗಳು ಇವೆ. ಈ ಕೃತ್ಯದಲ್ಲಿ ಇನ್ನೂ ಹಲವು ಆರೋಪಿಗಳು ಭಾಗಿಯಾಗಿದ್ದು ಅವರ ಬಂಧನಕ್ಕಾಗಿ ಉಡುಪಿ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.