ಬೆಂಗಳೂರು: ಅಂಗನವಾಡಿ ನೌಕರರನ್ನು ಕೋವಿಡ್ ಕೆಲಸಕ್ಕೆ ನಿಯೋಜಿಸುವ ಸಂದರ್ಭದಲ್ಲಿ, ಹಲವಾರು ಸೌಕರ್ಯ ಮತ್ತು ಸುರಕ್ಷತೆ ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಲಿಖಿತ ಆದೇಶಗಳನ್ನು ಮಾಡಲು ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಕರೆಯ
ಮೇರೆಗೆ ಇಂದು ನಡೆದ ರಾಜ್ಯದಾದ್ಯಂತ ಆನ್ ಲೈನ್ ಚಳುವಳಿ ನಡೆಯಿತು.
ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ತಮ್ಮ ಊರುಗಳಲ್ಲೇ, ಮನೆ ಮುಂದೆ, ಅಂಗನವಾಡಿ ಕೇಂದ್ರಗಳ ಮುಂದೆ ವಿವಿಧ ಬೇಡಿಕೆಗಳ ಫಲಕಗಳನ್ನು ಹಿಡಿದುಕೊಂಡು ಹೋರಾಟದಲ್ಲಿ ಭಾಗಿಯಾದರು. ತಮ್ಮ ಬೇಡಿಕೆಗಳನ್ನು ಕೂಡಲೇ ಈಡೇರಿಸಿ ಲಿಖಿತವಾಗಿ ಆದೇಶಗಳನ್ನು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯ ಅಧ್ಯಕ್ಷರಾದ ಕೆ. ಸೋಮಶೇಖರ್ ಯಾದಗಿರಿ ಮತ್ತು
ರಾಜ್ಯ ಕಾರ್ಯದರ್ಶಿ ರಮಾ ಟಿ.ಸಿ ರವರು “ರಾಜ್ಯದಲ್ಲಿ ಕೊರೋನಾ ವ್ಯಾಪಕವಾಗಿ ಹರಡಿದ್ದು ನೂರಾರು ಸಾವು ನೋವುಗಳು ನಿತ್ಯವೂ ಸಂಭವಿಸುತ್ತಿವೆ. ಅಂಗನವಾಡಿ ನೌಕರರೂ
ಸೇರಿದಂತೆ ರಾಜ್ಯದ ನಗರ ಮತ್ತು ಗ್ರಾಮೀಣ ಜನರಲ್ಲಿ ಪ್ರಾಣಭಯ ಹೆಚ್ಚಾಗಿದೆ. ಇಂತಹ ಸಾಂಕ್ರಾಮಿಕವನ್ನು ತಡೆಯಲು ವ್ಯವಸ್ಥಿತವಾದ ಯೋಜನೆ ಮತ್ತು ಮಾನವ ಸಂಪನ್ಮೂಲವೂ ಬೇಕು. ಆದರೆ ಅಂತಹ ಯೋಜನಾಬದ್ಧವಾದ ವ್ಯವಸ್ಥೆ ಮಾಡುವಲ್ಲಿ ಎಡವಿದ ರಾಜ್ಯ ಸರ್ಕಾರ ಎರಡು ದಿನಗಳ ಹಿಂದೆ ಅಂಗನವಾಡಿ ನೌಕರನ್ನೂ ಕೋವಿಡ್ ಸೇವೆಗೆ ಬಳಸಿಕೊಳ್ಳಲು ನಿರ್ಧರಿಸಿ, 15 ದಿನಗಳ ಬೇಸಿಗೆ ರಜೆಯಲ್ಲಿದ್ದ ಅವರನ್ನು, ರಜೆ ರದ್ದು ಪಡಿಸಿ ಕೊರೋನಾ ಕೆಲಸಕ್ಕೆ ಹಾಜರಾಗಲು ಆದೇಶ ನೀಡಿದೆ. ಆದರೆ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಜೀವ ರಕ್ಷಣೆ, ಜೀವನೋಪಾಯಕ್ಕೆ ಸಂಬಂಧಿಸಿದಂತೆ ಯಾವುದೇ ಸೂಕ್ತ ಕ್ರಮಗಳನ್ನು ಲಿಖಿತವಾಗಿ ಪ್ರಕಟಿಸದ ಸರ್ಕಾರ ತರಾತುರಿಯಲ್ಲಿ ಆದೇಶ ಮಾಡಿರುವುದು ನಮ್ಮನ್ನು ಆತಂಕಕ್ಕೆ ಈಡು ಮಾಡಿದೆ ಎಂದರು.
ನಮ್ಮ ಆತಂಕವನ್ನು ನಿವಾರಣೆ ಮಾಡಲು ವಿವಿಧ ಅಂಶಗಳ ಕುರಿತು ಸ್ಪಷ್ಟವಾದ ಲಿಖಿತ ಆದೇಶ ಮಾಡಲು ಆಗ್ರಹಿಸಿ ಮೇ 20 ರಂದು ರಾಜ್ಯದಾದ್ಯಂತ ಆನ್ ಲೈನ್ ಹೋರಾಟಕ್ಕೆ ಕರೆ ನೀಡಲಾಗಿತ್ತು ಎಂದರು. ಕಳೆದ ವರ್ಷ ಕೊರೋನಾಕ್ಕೆ ಬಲಿಯಾದ ಬಹಳಷ್ಟು ಕಾರ್ಯಕರ್ತೆಯರಿಗೆ ಸೂಕ್ತವಾದ ಚಿಕಿತ್ಸೆ ಸಿಗಲಿಲ್ಲ. ಮಡಿದವರ ಬಹಳಷ್ಟು ಕುಟುಂಬಗಳಿಗೆ ಘೋಷಿತ ರೂ.30 ಲಕ್ಷ ಇನ್ನೂ ತಲುಪಿಲ್ಲ. ಮಾಸ್ಕ್ ಸ್ಯಾನಿಟೈಜರ್ ಮತ್ತಿತರ ಸುರಕ್ಷತೆ ಸಾಮಗ್ರಿಗಳನ್ನು ನೀಡಲಿಲ್ಲ. ಎಲ್ಲರಿಗೂ ನೀಡಿದಂತೆ ವಿಶೇಷ ಪ್ರೋತ್ಸಾಹ ಧನ ನೀಡಲಿಲ್ಲ. ಇಂತಹ ಹಲವಾರು ಸಮಸ್ಯೆಗಳು ಇದ್ದು ಅವು ಇನ್ನೂ ನಿವಾರಣೆ ಆಗಲಿಲ್ಲ. ಇದರ ನಡುವೆ ನಿನ್ನೆ ರಾಜ್ಯದ ಮುಖ್ಯಮಂತ್ರಿಗಳು ಪ್ರಕಟಿಸಿರುವ ಕೊರೋನಾ ವಿಶೇಷ ಆರ್ಥಿಕ ಪರಿಹಾರ ಪ್ಯಾಕೇಜ್‍ನಲ್ಲಿ ಅಂಗನವಾಡಿ ನೌಕರರಿಗೆ ಯಾವುದೇ ಪ್ಯಾಕೇಜ್ ಘೋಷಣೆ ಮಾಡಲಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಕೊರೋನಾ ಸೋಂಕಿತರ ನಡುವೆ ಕೆಲಸ ಮಾಡುತ್ತಿರುವ ಅಂಗನವಾಡಿ ನೌಕರರ ಬಗ್ಗೆ ಇಂತಹ ನಿರ್ಲಕ್ಷ್ಯ ತೋರಿಸುತ್ತಿರುವ ಈ ಸರ್ಕಾರ ಈ ಮುಂದೆ ಕೊರೋನಾ ಕೆಲಸ ಮಾಡುವ ಸಂದರ್ಭದಲ್ಲಿ ಏನಾದರೂ ಅನಾಹುತ ಆದರೆ ಇವರಿಗೆ ಸೂಕ್ತ ರಕ್ಷಣೆ ನೀಡುತ್ತದೆ ಎಂದು ಹೇಗೆ ಭರವಸೆ ಮಾಡುವುದು ಎಂದು ಪ್ರಶ್ನಿಸಿದರು.
ಈ ಹೋರಾಟದ ನೇತೃತ್ವವನ್ನು ಸಂಘದ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ರಾಜ್ಯ ಉಪಾಧ್ಯಕ್ಷರಾದ ಡಿ.ಉಮಾದೇವಿ, ರಾಜ್ಯ ಕಾರ್ಯದರ್ಶಿ ರಮಾ ಟಿ.ಸಿ, ಹಾಗೂ ರಾಜ್ಯ ಮುಖಂಡರಾದ ನಾಗಮಣಿ, ಶಿವಲೀಲ, ಶಾರದಾ, ರಾಧ, ರೇಣುಕಾ ಪಾಟೀಲ್, ಅಯ್ಯಮ್ಮ, ಇಂದಿರಾ, ಲಕ್ಷ್ಮಿ ಲಕ್ಷಟ್ಟಿ, ನಿಂಗಮ್ಮ ಮಠ, ಸಾವಿತ್ರಿ, ಕೆ.ಸಿ.ತೇಲಿ, ಶೋಭಾ ಪಾಟೀಲ್, ಕಮಲಾ ಅಂಗಡಿ, ಮುಂತಾದ ಮುಖಂಡರು ವಹಿಸಿದ್ದರು.
ಹಕ್ಕೊತ್ತಾಯಗಳು :
- ಸಿಡಿಪಿಓ ಅವರಿಂದ ಲಿಖಿತ ಆದೇಶ ಪತ್ರ ನೀಡಿದ ಕಾರ್ಯಕರ್ತೆ/ಸಹಾಯಕಿಯರನ್ನು ಮಾತ ್ರ ಕೋವಿಡ್
ಕೆಲಸಕ್ಕೆ ನಿಯೋಜನೆ ಮಾಡಬೇಕು. - 50 ವರ್ಷ ಮೇಲ್ಪಟ್ಟವರು, ಗಂಬಿ üೀರ ಕಾಯಿಲೆ ಇದ್ದವರು, ಗಬಿ ರ್üಣಿ ಮತ್ತು ಚಿಕ್ಕ ಮಕ್ಕಳ ತಾಯಂದಿರನ್ನು
ಕೆಲಸಕ್ಕೆ ನಿಯೋಜನೆ ಮಾಡಬಾರದು. - ರದ್ದು ಮಾಡಿರುವ 15 ದಿನ ಬೇಸಿಗೆ ರಜೆಗಳನ್ನು ಮುಂದಿನ ದಿನಗಳಲ್ಲಿ ನೀಡಬೇಕು.
- ಪಾಸಿಟಿವ್ ಬಂದ ಕಾರ್ಯಕರ್ತೆ/ ಸಹಾಯಕಿ ಮತ್ತು ಅವರ ಅವಲಂಬಿತರಿಗೆ ಆಸ್ಪತ್ರೆ ಬೆಡ್ ಮೀಸಲಿಡಬೇಕು ಮತ್ತು ಉಚಿತ ಚಿಕಿತ್ಸೆ ನೀಡಬೇಕು.
- ರೂ. 30 ಲಕ್ಷ ವಿಮೆ ಎರಡನೇ ಅಲೆಯಲ್ಲಿಯೂ ಮುಂದುವರಿಸಿರುವ ಬಗ್ಗೆ ಸರ್ಕಾರದಿಂದ ಲಿಖಿತವಾಗಿ ಸ್ಪಷ್ಟನೆಯ ಪತ್ರ ಹೊರಡಿಸಬೇಕು.
- ಕೊರೋನಾ ವಾರಿಯರ್ಸ್ ಗೆ ನೀಡುವ ಮಾಸಿಕ ವಿಶೇಷ ಗೌರವ z sÀನ ಇವರಿಗೂ ನೀಡಬೇಕು.
- ಮಾಸ್ಕ್ ಸ್ಯಾನಿಟೈಜರ್ ಸಹಿತ ಸುರಕ್ಷತೆ ಕಿಟ್ ನೀಡಬೇಕು.
- ಬಾಕಿ ಇರುವ ಗೌರವ ಧನ ಈ ಕೂಡಲೇ ಪಾವತಿಸಬೇಕು. ವಂದನೆಗಳೊಂದಿಗೆ