ಮಂಗಳೂರು: ದಕ್ಷಿಣಕನ್ನಡ ಜಿಲ್ಲೆ ಬಿ.ಸಿ.ರೋಡ್ ಸಮೀಪದ ಅಜ್ಜಿಬೆಟ್ಟು ಎಂಬಲ್ಲಿ ಮನೋಜ್ ಎಂಬ ಯುವಕನ ಮೇಲೆ ನಡೆದಿರುವ ಹಲ್ಲೆ ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ಸಾಗಿದ್ದಾರೆ.
ಎಪ್ರಿಲ್ 4ರಂದು ರಾತ್ರಿ ಅಜ್ಜಿಬೆಟ್ಟು ಕ್ರಾಸ್ ಬಳಿ ಸ್ಕೂಟರ್‌ನಲ್ಲಿ ಬಂದ ಇಬ್ಬರು ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಎಂಬಾತನನ್ನು ಮಾರಕಾಸ್ತ್ರದಿಂದ ಇರಿದು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು. ಅದಾಗಲೇ ಪೊಲೀಸರು ಆರೋಪಿಗಳಲ್ಲಿ ಒಬ್ಬನಾದ ಇಮ್ರಾನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ನೀಡಿದ ಸುಳಿವನ್ನಾಧರಿಸಿ, ಆತನ ತಂದೆ ಶಾಹುಲ್ ಹಮೀದ್ ಮತ್ತು ಸಫ್ವಾನ್ ಎಂಬುವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಶಾಹುಲ್ ಎಂಬಾತ ಬಿ.ಸಿ.ರೋಡ್ ಸಮೀಪದ ಪರ್ಲಿಯಾ ನಿವಾಸಿಯಾಗಿದ್ದು SDPI ಮುಖಂಡ ಎನ್ನಲಾಗಿದೆ.