ದೆಹಲಿ: ಕೊರೋನಾ ತಲ್ಲಣದಿಂದಾಗಿ ಭಾರತ ಕೂಡಾ ಸಾವಿನ ಮನೆ ಎಂಬಂತಾಗಿದೆ. ಈ ಕೊರೋನಾ ಹೊಡೆತದಿಂದ ದೇಶ ತತ್ತರಗೊಂಡಿರುವಾಗಲೇ ಈಶಾನ್ಯ ಭಾರತದಲ್ಲಿ ಇಂದು ಭೂಮಿ ಕಂಪಿಸಿ ಆತಂಕ ಸೃಷ್ಟಿಸಿತು.
ಅಸ್ಸಾಂ ರಾಜ್ಯದ ಹಲವೆಡೆ ಇಂದು ಭೂಕಂಪ ಸಂಭವಿಸಿದೆ. ಭೂಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗ್ಗೆ 7.51ರ ಸುಮಾರಿಗೆ ಅಸ್ಸಾಂನ ಸೋನಿಪುರ್ ಸುತ್ತಮುತ್ತ ಭೂ ಕಂಪನವಾಗಿದ್ದು ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ಆದರೆ ಕೆಲವು ಕಟ್ಟಡಗಳಿಗೆ ಹಾನಿಯಾಗಿವೆ ಎಂದು ಹೇಳಲಾಗುತ್ತಿದೆ. ಸೋನಿತ್ ಪುರ್ ನಲ್ಲಿ ರಸ್ತೆಗಳಲ್ಲಿ ಬಿರುಕು ಕಂಡುಬಂದಿದೆ. ನಾಗಾಂವ್ ನಲ್ಲಿ ಕಟ್ಟಡ ವಾಲಿದ್ದು ಬೀಳುವ ಹಂತದಲ್ಲಿದೆ.
ಈ ಭೂಕಂಪನ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಜೊತೆಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ಪ್ರಧಾನಿಯವರು ಅಸ್ಸಾಂ ಸಿಎಂಗೆ ಭರವಸೆ ನೀಡಿದ್ದಾರೆ. ಈ ಕುರಿತು ಪ್ರಧಾನಿಯವರೇ ಟ್ವೀಟ್ ಮಾಡಿದ್ದಾರೆ.
Spoke to Assam CM Shri @sarbanandsonwal Ji regarding the earthquake in parts of the state. Assured all possible help from the Centre. I pray for the well-being of the people of Assam.
— Narendra Modi (@narendramodi) April 28, 2021