ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ನಿಯಂತ್ರಣಕ್ಕೆ ಬಾರದಂತಿದೆ. ಹಾಗಾಗಿ ರಾಜ್ಯ ಸರ್ಕಾರ ಕಠಿಣ ನಿಯಮಾವಳಿಗಳನ್ನು ಒಳಗೊಂಡ ಹೊಸ ಮಾರ್ಗಸೂಚಿಗಳನ್ನು ಇಂದು ಬಿಡುಗಡೆ ಮಾಡಿದೆ.
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಸೇರಬಹುದಾದ ಜನಸಂದಣಿ ಮೇಲೆ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.
ಹೊಸ ಮಾರ್ಗಸೂಚಿ ಹೀಗಿದೆ
- ಮದುವೆ ಸಮಾರಂಭ: ಕಲ್ಯಾಣ ಮಂಟಪದಲ್ಲಿ 100 ಜನ ಹಾಗೂ ತೆರೆದ ಪ್ರದೇಶಗಳಲ್ಲಿ 200 ಜನ ಮೀರುವಂತಿಲ್ಲ.
- ಜನ್ಮ ದಿನ ಕಾರ್ಯಕ್ರಮ: ಹಾಲ್‌ಗಳಲ್ಲಿ 25 ಜನ ಹಾಗೂ ತೆರೆದ ಪ್ರದೇಶಗಳಲ್ಲಿ 50 ಜನ ಮೀರುವಂತಿಲ್ಲ.
- ನಿಧನ/ ಶವ ಸಂಸ್ಕಾರ : ಹಾಲ್‌ಗಳಲ್ಲಿ 25 ಜನ ಹಾಗೂ ತೆರೆದ ಪ್ರದೇಶಗಳಲ್ಲಿ 50 ಜನ ಮೀರುವಂತಿಲ್ಲ.
- ಅಂತ್ಯ ಕ್ರಿಯೆ: 25 ಜನ ಮೀರುವಂತಿಲ್ಲ.
- ಇತರೆ ಸಮಾರಂಭಗಳು: ಹಾಲ್‌ಗಳಿಗೆ ಅನುಗುಣವಾಗಿ 50 ಜನ ಮೀರುವಂತಿಲ್ಲ.
- ರಾಜಕೀಯ ಕಾರ್ಯಕ್ರಮಗಳಲ್ಲಿ 200 ಮಂದಿ (ತೆರೆದ ಪ್ರದೇಶದಲ್ಲಿ) ಪಾಲ್ಗೊಳ್ಳಬಹುದಾಗಿದೆ.
- ಇದೇ ವೇಳೆ, ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ.
ರಾಜ್ಯಾದ್ಯಂತ ಸಾರ್ವಜನಿಕ ಸಮಾರಂಭ /ಆಚರಣೆಗಳು/ ಮನರಂಜನೆ ಕಾರ್ಯಕ್ರಮಗಳಿಗೆ ಮಾರ್ಗಸೂಚಿಗಳು.@mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @BangaloreBuzz pic.twitter.com/ZettgRQjld
— K'taka Health Dept (@DHFWKA) April 16, 2021
ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಹೋಟೆಲ್, ರೆಸಾರ್ಟ್ ಮಾಲೀಕರು, ಸಭೆ-ಸಮಾರಂಭಗಳ ಆಯೋಜಕರು ಹಾಗೂ ಸಾರ್ವಜನಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸರ್ಕಾರ ಕಟ್ಟಪ್ಪಣೆ ಮಾಡಿದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ. ಸುಧಾಕರ್, ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಸೋಂಕು ಹರಡುವಿಕೆ ತಡೆಗಟ್ಟಲು ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಸಭೆ-ಸಮಾರಂಭಗಳಲ್ಲಿ ಸೇರಬಹುದಾದ ಜನಸಂದಣಿ ಮೇಲೆ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ.
ಕಲ್ಯಾಣ ಮಂಟಪ, ಪಾರ್ಟಿ ಹಾಲ್, ಹೋಟೆಲ್, ರೆಸಾರ್ಟ್ ಮಾಲೀಕರು, ಸಭೆ-ಸಮಾರಂಭಗಳ ಆಯೋಜಕರು ಹಾಗೂ ಸಾರ್ವಜನಿಕರು ಈ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. pic.twitter.com/sNfH8KYHjl
— Dr Sudhakar K (Modi ka Parivar) (@DrSudhakar_) April 16, 2021