ಬೆಂಗಳೂರು: ಕನ್ನಡ ಸಿನಿಮಾ ಲೋಕದಲ್ಲಿ ಇದೀಗ ಆಶಾವಾದ ಸನ್ನಿವೇಶ. ಕೊರೋನಾ ಸಂಕಟ ಕಾಲದಲ್ಲಿ ಲಾಕ್‌ಡೌನ್ ಹೊಡೆತಕ್ಕೆ ಸಿಲುಕಿ ಸಿನಿಮಾ ರಂಗ ಬಡವಾಗಿದೆ. ಇದೀಗ ಪರಿಸ್ಥಿತಿ ಚೇತರಿಸಿಕೊಂಡಿದ್ದು ಅದಾಗಲೇ ಒಂದೊಂದೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ನಿರಾಶೆಯಲ್ಲಿದ್ದ ಕಲಾವಿದರಲ್ಲೂ ಕನಸುಗಳು ಗರಿಬಿಚ್ಚುತ್ತಿವೆ.
ಈ ಸಂದರ್ಭದಲ್ಲೇ ‘ಅಕ್ಷಿ’ ಸಿನಿಮಾಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಂದಿರುವುದರಿಂದ ಕರುನಾಡಿನ ಜನರ ಸಂತಸ ನೂರ್ಮಡಿಗೊಂಡಿದೆ.
‘ಕಲಾದೇಗುಲ ಸ್ಟುಡಿಯೋ’ ನಿರ್ಮಾಣದ ಮೊದಲ ಕನ್ನಡ ಚಲನಚಿತ್ರ “ಅಕ್ಷಿ”. ಬಹು ನಿರೀಕ್ಷೆಯ ಈ ಸಿನಿಮಾ ‘ಕಣ್ಣಿಗಾಗಿ ಕಣ್ಣಿನ ಹೋರಾಟ’ ಎಂಬ ಕ್ಯಾಪ್ಷನ್ ಜೊತೆ ಜನರ ಕುತೂಹಲದ ಕೇಂದ್ರಬಿಂದುವಾಗಿದೆ.
‘ಅಕ್ಷಿ’ ಚಿತ್ರದ ಲಿರಿಕಲ್ ಸಾಂಗ್ ಸಂಗೀತ ರಸಿಕರ ಮನತಣಿಸುತ್ತಿದೆ. ಇತ್ತೀಚೆಗಷ್ಟೇ ಅನಾವರಣಗೊಂಡಿರುವ ಈ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು ಸಕತ್ ಲೈಕ್ ಗಿಟ್ಟಿಸಿಕೊಳ್ಳುತ್ತಿದೆ. ಈ ಸಾಧನೆಯ ಹಿಂದಿರುವ ಕಲಾದೇಗುಲ ಶ್ರೀನಿವಾಸ್ ಅವರಿಗೆ ಅಭಿನಂದನೆಗಳ ಹೂಮಳೆಯಾಗುತ್ತಿದೆ..
ಇದನ್ನೂ ಓದಿ.. ಕನ್ನಡದ ‘ಅಕ್ಷಿ’ ಚಿತ್ರಕ್ಕೆ ರಾಷ್ಟ್ರೀಯ ಪುರಸ್ಕಾರ