ದೆಹಲಿ: ಮಹಾರಾಷ್ಟ್ರ – ಕರ್ನಾಟಕ ಗಡಿ ವಿವಾದ ಕುರಿತಂತೆ ಎಂಇಎಸ್ ಹಾಗೂ ಶಿವಸೇನಾ ನಾಯಕರ ನಡೆ ಬಗ್ಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಸಂಸದ ಜಿ.ಸಿ.ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಜಿ.ಸಿ ಚಂದ್ರಶೇಖರ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿ, ಮುಂದಾಗಬಹುದಾದ ಅನಾಹುತಗಳ ಬಗ್ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಯಾವುದೇ ವಿವಾದ ಸಂಘರ್ಷದಿಂದ ಬಗೆಹರಿಯುವುದಿಲ್ಲ. ಗಾಂಧಿಜಿಯವರ ಅಹಿಂಸಾ ಸಂದೇಶ ಇಡಿ ಪ್ರಪಂಚಕ್ಕೆ ಮಾದರಿಯಾಗಿದದ್ಉ, ಅದರಂತೆ ಬೆಳಗಾವಿ ಗಡಿ ವಿಚಾರದಲ್ಲೂ ಶಂತಿಯುತ ಮಾರ್ಗ ಅನುಸರಿಸಬೇಕಿದೆ ಎಂದು ಚಂದ್ರಶೇಖರ್ ಪ್ರತಿಪಾದಿಸಿದರು.
1956ರ ಕೇಂದ್ರವಾರು ಭಾಷಾವಾರು ವಿಂಗಡಣೆ ಆದಾಗಿನಿಂದಲೂ ಬೆಳಗಾವಿ ಕರ್ನಾಟಕದ ಅಂಗವಾಗಿದೆ ಎಂದು ಸಂಸತ್ತಿನ ಗಮನಸೆಳೆದ ಚಂದ್ರಶೇಖರ್, ಮಹಾಜನ್ ವರದಿಯಲ್ಲೂ ಕರ್ನಾಟಕದ ಅವಿಭಾಜ್ಯ ಅಂಗ ಅಂತ ಹೇಳಲಾಗಿದೆ. ಆದರೂ ರಾಜಕೀಯ ಲಾಭಕ್ಕಾಗಿ ಗಡಿವಿವಾದವನ್ನು ಕೆದಕುತ್ತಿದ್ದಾರೆ ಎಂದು ದೂರಿದರು.
ನವೆಂಬರ್ 1ನ್ನು ಕರಾಳದಿನವನ್ನಾಗಿ ಆಚರಣೆ ಮಾಡುತ್ತಿದ್ದಾರೆ. ಸಿಮಾ ಸಂಕಲ್ಪ ಎಂಬ ಹೆಸರಿನಲ್ಲಿ ಬೆಳಗಾವಿಯನ್ನು ವಶ ಪಡೆಸಿಕೊಳ್ಳುತ್ತೆವೆ ಅಂತ ಹೇಳುತ್ತಿದ್ದಾರೆ. ಇದರಿಂದ ಸ್ವಾಭಿಮಾನದ ನಮ್ಮ ರಾಜ್ಯ ಹೊತ್ತಿ ಉರಿಯುತ್ತಿದೆ ಎಂಬ ನೋವನ್ನು ಅವರು ರಾಜ್ಯಸಭೆಯಲ್ಲಿ ಹಂಚಿಕೊಂಡು, ಕರ್ನಾಟಕದ ನಿಲುವಿನ ಬಗ್ಗೆಯೂ ದೇಶದ ಗಮನ ಸೆಳೆಯುವಂತೆ ಮಾಡಿದರು.