ದೊಡ್ಡಬಳ್ಳಾಪುರ : ಕೊರೊನಾ ವಾರಿಯರ್ಸ್ ಗಳಾಗಿ ಫ್ರಂಟ್ ಲೈನ್ ನಲ್ಲಿ ಕಾರ್ಯನಿರ್ವಸುತ್ತಿರುವ ಎಸ್ಎಫ್ ಕೋವಿಡ್ ಲಸಿಕೆ ಹಾಕಿಸಿಕೊಂಡು ಗಮನಸೆಳೆದರು.
ಯಲಹಂಕದ ಬಿಎಸ್ಎಫ್ ಯೋಧರು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆಯ ಚುಚ್ಚುಮದ್ದು ಹಾಕಿಸಿಕೊಂಡರು. ಮೊದಲ ತಂಡದಲ್ಲಿ 300ಕ್ಕೂ ಹೆಚ್ಚು ಯೋಧರು ಕೋವಿಡ್ ಲಸಿಕೆ ತೆಗೆದು ಕೊಂಡರು.
ನಾಳೆಯೂ ಬಿಎಸ್‌ಎಫ್ ಯೋಧರ ಎರಡನೇ ತಂಡ ದೊಡ್ಡಬಳ್ಳಾಪುರ ಆಸ್ಪತ್ರೆಯಲ್ಲಿ ಲಸಿಕೆ ತೆಗೆದುಕೊಳ್ಳುವರು, ಲಸಿಕೆ ಹಾಕಲು ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಯೋಧರು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿದ್ದು, ಲಸಿಕೆ ಹಾಕುವ ಮುನ್ನ ಯೋಧರ ಆರೋಗ್ಯದ ಮಾಹಿತಿ ಪಡೆದು ನಂತರ ಲಸಿಕೆಯನ್ನು ವೈದ್ಯರು ಹಾಕುತ್ತಿದ್ದರು.ಲಸಿಕೆ ಪಡೆದ ನಂತರ 30 ನಿಮಿಷಗಳ ವಿಶ್ರಾಂತಿ ಪಡೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಲಸಿಕೆ ಪಡೆದ ಯೋಧರು ಕೋವಿಡ್‌ನ ಫ್ರೇಮ್‌ನಲ್ಲಿ ನಿಂತು ಫೋಟೋ ತೆಗೆದುಕೊಂಡು ಖುಷಿ ಪಟ್ಟರು.