ಬೆಂಗಳೂರು: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನ ನಿರ್ದೇಶಕರು ಶ್ರೀಮತಿ ಅರುಂಧತಿ ಚಂದ್ರಶೇಖರ್ ಇವರ ಅಧ್ಯಕ್ಷತೆ ಯಲ್ಲಿ ರಾಜ್ಯ ಮಟ್ಟದ ಕುಂದುಕೊರತೆ ಸಭೆ ಜರುಗಿತು.
ಸಭೆಯಲ್ಲಿ ಯೋಜನಾ ನಿರ್ದೇಶಕರು, ಉಪ ನಿರ್ದೇಶಕರು ಮತ್ತು ರಾಜ್ಯಮಟ್ಟದ ಆಶಾ ಕಾರ್ಯಕ್ರಮ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಂಘದ ರಾಜ್ಯ ಅಧ್ಯಕ್ಷರಾದ ಕೆ ಸೋಮಶೇಖರ್ ಯಾದಗಿರಿ ಹಾಗೂ ರಾಜ್ಯ ಕಾರ್ಯದರ್ಶಿಗಳಾದ ಡಿ ನಾಗಲಕ್ಷ್ಮಿ ಹಾಗೂ ರಾಜ್ಯ ಮುಖಂಡರಾದ ಟಿಸಿ ರಮ ಹಾಗೂ ಮುಖಂಡರಾದ ಹನುಮೇಶ್ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಹಲವಾರು ಜಿಲ್ಲಾ ಮುಖಂಡರೊಂದಿಗೆ ಈ ಸಭೆಯು ಸುದೀರ್ಘ ಕಾಲ ನಡೆದ ಸಭೆಯಲ್ಲಿ, ಆಶಾ ಕಾರ್ಯಕರ್ತೆಯರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು, ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಯಿತು ಎಂದು ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾಹಿತಿ ಹಂಚಿಕೊಂಡಿದ್ದಾರೆ.
.ಮುಖ್ಯವಾಗಿ ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ನೀಡುವಿಕೆಯಲ್ಲಿ ಆಗುತ್ತಿರುವ ಲೋಪದೋಷಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಯಿತು. ಹಾಗೆಯೇ ಆರ್ ಸಿ ಎಚ್ ಪೋರ್ಟಲ್ ನಿಂದಾಗಿ ಆಶಾ ಕಾರ್ಯಕರ್ತೆಯರಿಗೆ ಸಂಪೂರ್ಣ ವಾಗಿ ದುಡಿದಷ್ಟು ಕೈ ಸೇರುತ್ತಿಲ್ಲ ಎಂಬುದನ್ನು ಸಂಘದ ಪದಾಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಈ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ PHC ಗೆ ಒಬ್ಬ ಡಾಟಾ ಎಂಟ್ರಿ ಮಾಡುವವರನ್ನು ನೇಮಿಸುವ ಕುರಿತು ಸದ್ಯದಲ್ಲಿ ನಡೆಯುವ EC ಸಭೆಯಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿದರು.
ಕೋವಿಡ್ ಸಾಂಕ್ರಾಮಿಕ ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸಿರುವ ಸಂದರ್ಭದಲ್ಲಿ ಕಾರ್ಯಕರ್ತರಿಗೆ ವಿಶೇಷ ಪ್ರೋತ್ಸಾಹ ಧನ ಕೇಂದ್ರದಿಂದ ಮಾಸಿಕ 1000 ಒಂದು ವರ್ಷದವರೆಗೆ ರಾಜ್ಯದಾದ್ಯಂತ ಎಲ್ಲಾ ಕಾರ್ಯಕರ್ತರಿಗೆ ತಲುಪದಿರುವ ವಿಷಯನ್ನು ಪ್ರಸ್ತಾಪಿಸಲಾಯಿತು. ಯಾರಿಗೆ ತಲುಪಿಲ್ಲ ಅದನ್ನು ಕೂಡಲೇ ತಲುಪಿಸುವ ಸೂಕ್ತ ಕ್ರಮ ಕೈಗೊಳ್ಳುವ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಆಶಾ ಕಾರ್ಯಕರ್ತೆಯರು ನಿರ್ವಹಿಸಿದ ಕೆಲಸಗಳಿಗೆ ಸೂಕ್ತ ಸಂಭಾವನೆ ಬರದಿರುವುದರ ಬಗ್ಗೆ ಕೂಡ ಪ್ರಸ್ತಾಪಿಸಲಾಯಿತು. ಈ ಬಗ್ಗೆ ಕೂಡ ಕಳೆದ ಎರಡು ವರ್ಷದ ಸರಾಸರಿ ಆಶಾ ಕಾರ್ಯಕರ್ತೆಯರು ಪಡೆದಿರುವ ಪ್ರೋತ್ಸಾಹಧನ ಅವರು ಮಾಡಿರುವ ಕೆಲಸಗಳು ಒಂದು ಪಟ್ಟಿಯೊಂದಿಗೆ ವಿವರವನ್ನು ಪಡೆದು ನಂತರ ಸರಾಸರಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು ಎಂಬ ಭರವಸೆ ಸಿಕ್ಕಿದೆ.
ಪ್ರತಿ ತಿಂಗಳು ಮೊಬೈಲ್ ಮುಖಾಂತರ ಪ್ರತಿ ತಿಂಗಳು ಪ್ರತಿ ಆಶಾಗೆ ಕ್ಲೇಮ್ ಲಿಸ್ಟ್ ಮತ್ತು ರಿಲೀಸ್ ಕಾಪಿ ಕಳಿಸುವ ವ್ಯವಸ್ಥೆ ಯೊಂದಿಗೆ ಹಾಗೂ ಈಗಾಗಲೇ ಇರುವ RCH ವೆಬ್ ಸೈಟಲ್ಲಿ ಪ್ರತಿ ಆಶಾ ಕಾರ್ಯಕರ್ತೆಯರ ಪಡೆದಿರುವ ಪ್ರೋತ್ಸಾಹಧನ ಮತ್ತು ಕ್ಲೇಮ್ ಲಿಸ್ಟನ್ನು ಪ್ರಕಟಿಸಲಾಗುತ್ತದೆ.
ಈಗಾಗಲೇ ಕೋವಿಡ್ ಅವಧಿಯಲ್ಲಿ ಆಶಾ ಕಾರ್ಯಕರ್ತೆಯರು ಸುಮಾರು ಹತ್ತಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಸಾವಿಗೀಡಾಗುತ್ತಾರೆ ಇವರಿಗೆ ಈಗಾಗಲೇ ಕೇಂದ್ರ ಸರ್ಕಾರದಿಂದ ಘೋಷಿಸಿರುವಂತೆ 50 ಲಕ್ಷ ರೂಪಾಯಿ ಅವರ ಕುಟುಂಬಗಳಿಗೆ ಪರಿಹಾರ ಒದಗಿಸುವ ಬಗ್ಗೆ ಒತ್ತಾಯಿಸಲಾಯಿತು. ಈ ಬಗ್ಗೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುತ್ತಾರೆ ಎಂಬ ಭರವಸೆ ಸರ್ಕಾರದ ಕಡೆಯಿಂದ ಸಿಕ್ಕಿದೆ ಎಂದು ಡಿ.ನಾಗಲಕ್ಷ್ಮಿ ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ಆಯುಕ್ತರಾದ ತ್ರಿಲೋಕಚಂದ್ರ ಇವರನ್ನು ಸಹ ಭೇಟಿ ಮಾಾಡಿ, ಮುಂದಿನ ಬಜೆಟ್’ನಲ್ಲಿ ಆಶಾ ಕಾರ್ಯಕರ್ತೆಯರಿಗೆ ಕನಿಷ್ಠ ₹12000 ನಿಗದಿತ ವೇತನ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಗೌರವಧನವನ್ನು ಹೆಚ್ಚಿಸಬೇಕೆಂದು ಮನವಿ ಸಲ್ಲಿಸಲಾಯಿತು. ಆಯುಕ್ತರು ಈ ಬಗ್ಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿ.ನಾಗಲಕ್ಷ್ಮಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.