ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದೆ. ರಾಜಧಾನಿ ಬೆಂಗಳೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಸಂಜೆಯ ಹೊತ್ತು ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಏರುಪೇರಾಗಿದೆ.
ಮೈಸೂರು, ಕೊಡಗು, ಹಾಸನ ಜಿಲ್ಲೆಗಳಲ್ಲೂ ಆಲಿಕಲ್ಲು ಮಳೆಯಾಗಿದೆ. ಹಾಸನ, ಕೊಡಗು ಜಿಲ್ಲೆಗಳಲ್ಲಿ ಗುರುವಾರವೂ ಇದೆ ರೀತಿ ಆಲಿಕಲ್ಲು ಮಳೆಯಾಗಿದ್ದು ಕಾಫಿ ಬೆಳೆ ನಾಶವಾಗಿದೆ.
ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನಲ್ಲಿ ಶುಕ್ರವಾರ ದಿಡೀರನೆ ಆಲಿಕಲ್ಲು ಮಳೆಯಾಗಿದೆ. ಗುಡುಗು ಸಹಿತ ಮಳೆಯಾಗಿದ್ದು, ಮೆಣಸ ಗ್ರಾಮ ಹಾಗೂ ಶನಿವಾರಸಂತೆ, ಅಂಕನಳ್ಳಿ, ನಿಡ್ತ ಅಂಕನಹಳ್ಳಿ ಸುತ್ತ ಮುತ್ತ ಸುದೀರ್ಘ ಹೊತ್ತು ಆಲಿಕಲ್ಲು ಮಳೆಬಿದ್ದ ಪ್ರದೇಶದಲ್ಲಿ ಮಂಜುಗಡ್ಡೆಯ ಹೊದಿಕೆಯ ಸನ್ನಿವೇಶ ಕಂಡುಬಂತು.