ಬೆಂಗಳೂರು: ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 1271 ದೇವಸ್ಥಾನಗಳ ಜೀರ್ಣೋದ್ಧಾರಕ್ಕಾಗಿ ಒಟ್ಟು ರೂ.87.25 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ.
ಜೂನ್ 2024 ರಿಂದ ಮಾರ್ಚ್ 16, 2024 ರವರೆಗೂ ಒಟ್ಟು ರೂ.87.25 ಕೋಟಿ ಅನುದಾನವನ್ನು ಮುಖ್ಯಮಂತ್ರಿಗಳ ಹಾಗೂ ಮುಜರಾಯಿ ಮಂತ್ರಿಗಳ ನಿಧಿಯಲ್ಲಿ ಬಿಡುಗಡೆ ಮಾಡಲಾಗಿದೆ.
ಈ ಮೇಲ್ಕಂಡ ಅನುದಾನದಲ್ಲಿ ದೇವಸ್ಥಾನಗಳ ಮೂಲಭೂತ ಸೌಕರ್ಯ ಪ್ರಮುಖವಾಗಿ ಶಿಥಿಲಾವಸ್ಥೆಯಲ್ಲಿರುವ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ, ದೇವಾಲಯದ ಕಾಪೌಂಡ್ ನಿರ್ಮಾಣ ಇತರೆ ಅತ್ಯಗತ್ಯ ಕಾರ್ಯಗಳಿಗೆ ಅನುದಾನವನ್ನು ಬಳಸಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಹಲವಾರು ಕಾರ್ಯಕ್ರಮಗಳು:
-
ಈಗಾಗಲೇ ರಾಜ್ಯ ಬಜೆಟ್ ನಲ್ಲಿ ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ ರೂ.100 ಕೋಟಿ ಅನುದಾನವನ್ನು ಘೋಷಿಸಲಾಗಿದೆ.
-
ಇದರೊಂದಿಗೆ ಶ್ರೀ ಕ್ಷೇತ್ರ ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ಚಿಕ್ಕ ಮಂಚಾಲೆ ಗ್ರಾಮದ ಬಳಿರೂ.158 ಕೋಟಿ ವೆಚ್ಚದಲ್ಲಿ ಸೇತುವೆ ಮತ್ತು ಬ್ಯಾರಿಕೆಡ್ ನಿರ್ಮಾಣಕ್ಕೆ ಬಜೆಟ್‌ನಲ್ಲಿಅನುದಾನ
-
ಶ್ರೀಶೈಲಂ ದೇವಸ್ಥಾನದಲ್ಲಿ ವಸತಿ ಸಂಕೀರ್ಣಕ್ಕಾಗಿ ಬಜೆಟ್ ನಲ್ಲಿ ರೂ.85 ಕೋಟಿ ಅನುದಾನ
-
ವಾರಣಾಸಿಯ ಹನುಮಾನ್ ಘಾಟ್ ನಲ್ಲಿರುವ ಕರ್ನಾಟಕ ರಾಜ್ಯ ಛತ್ರದ ದುರಸ್ತಿ ಕಾರ್ಯಕ್ಕೆ ರೂ.5 ಕೋಟಿ ಬಜೆಟ್ ನಲ್ಲಿ ಅನುದಾನ
ರಾಜ್ಯದ ಪ್ರಮುಖ ದೇವಾಲಯಗಳಿಗೆ ಪತ್ಯೇಕ ಪ್ರಾಧಿಕಾರ ಘೋಷಣೆ ಮಾಡಲಾಗಿದೆ.
- ಚಾಮುಂಡಿ ಬೆಟ್ಟ ಮೈಸೂರು,
- ಹುಲಿಗೆಮ್ಮ ದೇವಾಲಯ ಕೊಪ್ಪಳ,
- ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ದೊಡ್ಡಬಳ್ಳಾಪುರ ಹಾಗೂ
- ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಸವದತ್ತಿ ಎಲ್ಲಮ್ಮ ದೇವಾಲಯಗಳಿಗೆ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಲಾಗಿರುತ್ತದೆ.
ಈ ಹಿಂದೆ ಹಲವು ದೂರುಗಳು/ ಅಸಮಾಧಾನಗಳು ತಸ್ತಿಕ್ ಹಣ ಮತ್ತು ವರ್ಷಾಸನ ಬಿಡುಗಡೆ ಮಾಡುವ ಸಂಬಂಧ ದಾಖಲಾಗುತ್ತಿದ್ದವು. ಪ್ರಸ್ತುತ ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ತಸ್ತಿಕ್ ಹಣ ರೂ.156. 91 ಕೋಟಿ ಹಾಗೂ ವರ್ಷಾಸನ ರೂ.28.14 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ತಿರುಮಲದಲ್ಲಿ ರೂ.200 ಕೋಟಿಯ ವಸತಿ ಸಂಕೀರ್ಣ ಮುಕ್ತಾಯದ ಹಂತದಲ್ಲಿರುತ್ತದೆ.