ನವದೆಹಲಿ: ಹೊಸ ವರ್ಷವು ನಿರಂತರ ಹರ್ಷ ತರಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದೃಶದ ಜನತೆಗೆ ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಟ್ವೀಟ್ ಮಾಡಿ, ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಸಂತೋಷ, ಆರೋಗ್ಯ ಮತ್ತು ಸಮೃದ್ಧಿ ಲಭಿಸಲಿ ಎಂದು ಶುಭ ಹಾರೈಸಿದ್ದಾರೆ.
ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕೂಡಾ ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ ಹಾಕಿ, ಈ ವರ್ಷವು ಎಲ್ಲರ ಜೀವನದಲ್ಲಿ ಹೊಸ ಉತ್ಸಾಹ, ಹೊಸ ಸಂತೋಷ ತರಲಿ ಎಂದು ಶುಭ ಹಾರೂಸಿದ್ದಾರೆ.