ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಬೆನ್ನಲ್ಲೇ ಮೊದಲ ಬಾರಿಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, “ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕುವ ಮೂಲಕ ಸರ್ಕಾರ ಉಲ್ಲಂಘಿಸಿದೆ” ಎಂದು ಕಿಡಿ ಕಾರಿದ್ದಾರೆ.
“ಜಮ್ಮು ಕಾಶ್ಮೀರವನ್ನು ಇಬ್ಭಾಗವಾಗಿಸೋದ್ರಿಂದ, ಜನಪ್ರತಿನಿಧಿಗಳನ್ನ ಬಂಧಿಸೋದ್ರಿಂದ ಹಾಗೂ ನಮ್ಮ ಸಂವಿಧಾನವನ್ನ ಉಲ್ಲಂಘಿಸೋದ್ರಿಂದ ರಾಷ್ಟ್ರದ ಏಕೀಕರಣ ಹೆಚ್ಚಾಗುವುದಿಲ್ಲ. ಈ ದೇಶ, ಜನರಿಂದ ನಿರ್ಮಿತವಾಗಿದೆಯೇ ಹೊರತು, ತುಂಡು ಭೂಮಿಗಳಿಂದ ಅಲ್ಲ”, ಎಂದು ರಾಹುಲ್ ಗಾಂಧಿ ಟ್ವಿಟರ್ನಲ್ಲಿ ಹರಿಹಾಯ್ದಿದ್ದಾರೆ. ‘ಅಧಿಕಾರ ದುರುಪಯೋಗದಿಂದ ನಮ್ಮ ರಾಷ್ಟ್ರದ ಭದ್ರತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ’ ಎಂದು ಅವರು ಹೇಳಿದ್ದಾರೆ.