ಕೈವ್: ಉಕ್ರೇನ್ ಮೇಲೆ ರಷ್ಯಾ ಮತ್ತೆ ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಶನಿವಾರ ರಾತ್ರಿ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿದ ಪರಿಣಾಮ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಾರೆ.
ಡಿನಿಪ್ರೋ ನಗರದಲ್ಲಿ ಅಪಾರ್ಟ್‌ಮೆಂಟ್ ಸೇರಿ ಹಲವು ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆದಿದ್ದು ಕಟ್ಟಡಗಳು ಧ್ವಂಸಗೊಂಡಿವೆ. ಕೈವ್ ಮತ್ತು ಖಾರ್ಕಿವ್ ಪ್ರದೇಶಗಳ ಮೇಲೂ ಕ್ಷಿಪಣಿ ದಾಳಿಯಾಗಿದ್ದು, ಸರಣಿ ಘಟನೆಗಳಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆಂದು ಸುದ್ದಿಸಂಸ್ಥೆಗಳು ಹೇಳಿವೆ.
ಈ ಘಟನೆಯನ್ನು ವಿಶ್ವ ಸಮುದಾಯ ಖಂಡಿಸಿದೆ. ರಷ್ಯಾವು ಭಯೋತ್ಪಾದನಾ ರಾಷ್ಟ್ರ ಎಂದು ನೆಟ್ಟಿಗರು ದೂಷಿಸಿದ್ದಾರೆ.
Russia is a terrorist state.
They bring destruction, death & immense suffering everywhere they go.
Atrocities, mass killings, attacks on residential buildings – like today in Dnipro – will never be forgiven& forgotten. The time for accountability will come.
🇱🇹 stands with 🇺🇦! pic.twitter.com/22iLd0OFOP— Gitanas Nausėda (@GitanasNauseda) January 14, 2023