ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಗಣೇಶ ವಿಸರ್ಜನೆ ವೇಳೆ ಶುಕ್ರವಾರ ರಾತ್ರಿ ಸರಣಿ ಅವಘಡಗಳು ಸಂಭವಿಸಿವೆ. ಆಗಸ್ಟ್ 31 ರಂದು ಆರಂಭವಾದ 10 ದಿನಗಳ ಗಣೇಶೋತ್ಸವಕ್ಕೆ ಶುಕ್ರವಾರ ತೆರೆಬಿದ್ದಿದೆ. ಈ ಗಣೇಶೋತ್ಸವದ ವಿಸರ್ಜನೆ ವೇಳೆ ಕೆಲವೆಡೆ ಯುವಕರು ಮುಳುಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ, ಪೆಂಡಾಲ್ ಅವಘಡ ಸಹಿತ ಇನ್ನೂ ಕೆಲವು ಅನಾಹುತಗಳು ಹಲವರನ್ನು ಬಲಿತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ ಅನಾಹುತ?
-
ವಾರ್ಧಾ ಜಿಲ್ಲೆಯಲ್ಲಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ.
-
ನಾಗ್ಪುರ ಬಳಿ ನಾಲ್ವರು ಸಾವನ್ನಪ್ಪಿದ್ದಾರೆ
-
ಅಹ್ಮದ್‌ನಗರ ಜಿಲ್ಲೆಯ, ಸೂಪಾ, ಬೆಳವಂಡಿಯಲ್ಲಿ ಇಬ್ಬರು ಮುಳುಗಿ ಸಾವನ್ನಪ್ಪಿದ್ದಾರೆ,
-
ಜಲಗಾಂವ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
-
ಯವತ್ಮಾಲ್ ಜಿಲ್ಲೆಯಲ್ಲಿ ಇಬ್ಬರು ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
-
ದೇವ್ಲಿಯಲ್ಲಿ ಒಬ್ಬ ಮುಳುಗಿ ಸಾವನ್ನಪ್ಪಿದ್ದಾನೆ.
-
ಪುಣೆ ಸಮೀಪ ಭಾಗ ಎಂಬಲ್ಲಿ ಒಬ್ವ ಸಾವನ್ನಪ್ಪಿದ್ದಾನೆ.
-
ಧುಲೆ ಎಂಬಲ್ಲಿ ಒಬ್ವ ಮೃತಪಟ್ಟಿದ್ದಾನೆ.
-
ಸತಾರಾ ಎಂಬಲ್ಲಿ ಮತ್ತೊಬ್ಬ ಸಾವನ್ನಪ್ಪಿದ್ದಾನೆ
-
ಸೋಲಾಪುರದಲ್ಲಿ ಒಬ್ಬರು ಅಪಮೃತ್ಯುಗೊಳಗಾಗಿದ್ದಾನೆ.
-
ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
-
ಥಾಣೆಯಲ್ಲಿ, ಮಳೆಯ ನಡುವೆ ಕೋಲ್ಬಾದ್ ಪ್ರದೇಶದಲ್ಲಿ ಗಣೇಶ ಪೆಂಡಾಲ್ ಮೇಲೆ ಮರವೊಂದು ಕುಸಿದು 55 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.


























































