ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ನಟ ರಾಜೇಶ್ ವಿಧಿವಶರಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದರ ನಟನಕೌಶಲ್ಯ ಮೂಲಕ ಜನಪ್ರಿಯರಾಗಿದ್ದ ಕಲಾ ತಪಸ್ವೀ ರಾಜೇಶ್ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಇದ್ದರು. ಬೆಳಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರಿಂದು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
‘ಸುದರ್ಶನ ನಾಟಕ ಮಂಡಳಿ’, ‘ಶಕ್ತಿ ನಾಟಕ ಮಂಡಳಿ’ಯಿಂದ ರಜತಪರದೆಗೆ ಪ್ರವೇಶಿಸಿದ್ದ ರಾಜೇಶ್, ಆರಂಭದಲ್ಲಿ ವಿದ್ಯಾಸಾಗರ್ ಎಂಬ ಹೆಸರಿನಿಂದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ‘ನಮ್ಮ ಊರು’ ಚಿತ್ರದ ಯಶಸ್ಸಿನ ಬಳಿಕ ರಾಜೇಶ್ ಆದರು. ‘ಗಂಗೆ ಗೌರಿ’, ‘ಸತಿ ಸುಕನ್ಯ’, ಬೆಳುವಲದ ಮಡಿಲಲ್ಲಿ’, ಸೊಸೆ ತಂದ ಸೌಭಾಗ್ಯ, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಹಲವಾರು ಸ್ಮರಣೀಯ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್ ತಮ್ಮ ಅಭಿನಯದಿಂದಲೇ ಜನಮನ ಗೆದ್ದಿದ್ದರು.
150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಾಜೇಶ್ ಅವರ ನಿಧನದಿಂದ ಚಿತ್ರರಂಗ ಬಡವಾಗಿದೆ. ರಾಜೇಶ್ ನಿಧನಕ್ಕೆ ಗಣ್ಯರನೇಕರು ಕಂಬನಿ ಮಿಡಿದಿದ್ದಾರೆ.