ಹನೂರು.: ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಹನೂರು ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲವಿಲ್ಲದೆ ಯಶಸ್ವಿಯಾಗಿ ನೆಡೆದಿದ್ದು ಮೊದಲ ದಿನ ನಡೆದ ಕನ್ನಡ ಭಾಷಾ ಪರೀಕ್ಷೆಯಲ್ಲಿ 24 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಹನೂರು ಪಟ್ಟಣದ ಕ್ರಿಸ್ತರಾಜ ಪಿಯು ಕಾಲೇಜು,ಜಿವಿ ಗೌಡ ಪಿಯು ಕಾಲೇಜ್, ತಾಲ್ಲೂಕಿನ ರಾಮಾಪುರದ ಜೆಎಸ್‌ಎಸ್ ಪಿಯು ಕಾಲೇಜ್ ಒಟ್ಟಾರೆ ಹನೂರು ತಾಲ್ಲೂಕಿನಲ್ಲಿ ಮೂರು ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿತ್ತು . ಪರೀಕ್ಷೆಗೆ 1031 ವಿದ್ಯಾರ್ಥಿಗಳು ನೊಂದಣಿಯಾಗಿದ್ದರು ಮೊದಲ ದಿನ ನಡೆದ ಕನ್ನಡ ಭಾಷಾ ಪರೀಕ್ಷೆಯಲ್ಲಿ ಒಟ್ಟು 24 ವಿದ್ಯಾರ್ಥಿಗಳು ಗೈರಾಗಿ, 1007 ವಿದ್ಯಾರ್ಥಿಗಳು ಹಾಜರಾಗಿದ್ದರು.
ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಾಗಿ ಪ್ರಿಯಾ ಶಂಕರ್,ಸ್ವಾಮಿ,ಮುತ್ತುರಾಜ್ ಉಪ ಮುಖ್ಯ ಅಧೀಕ್ಷಕರಾದ ಮಹದೇವಪ್ರಭು ರವರು, ವಿಶೇಷ ಜಾಗೃತ ದಳದ ಸದಸ್ಯರಾಗಿ ರಾಮೇಗೌಡ ,ಉತ್ತರ ಪತ್ರಿಕೆಯ ಪಾಲಕರಾಗಿ ಪ್ರಕಾಶ್ ರವರು, ಕಛೇರಿಯ ಅಧೀಕ್ಷಕರಾದ ಪವಿತ್ರ ಪಿ.ಎನ್ ರವರು, ಪೊಲೀಸ್ ಇಲಾಖೆಯ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದರು.