ಕೋಸ್ಟಲ್‍ವುಡ್‍ನಲ್ಲಿ ಗಿರಿಗಿಟ್ ಚಿತ್ರದ ನಂತರ ಮತ್ತೆ ಸಿನಿರಂಗ ತಿರುಗಿ ನೋಡುವಂತೆ ಮಾಡಿದ್ದು 2 ಎಕ್ರೆ ತುಳು ಚಿತ್ರ . ವಿಸ್ಮಯ್ ವಿನಾಯಕ್ ನಿರ್ದೇಶನದ ಈ ಚಿತ್ರ ಜನವರಿ 10 ರಂದು ಕರಾವಳಿಯಾದ್ಯಂತ ತೆರೆಕಂಡು ಹೌಸ್‍ಫುಲ್ ಪ್ರದರ್ಶನ ನೀಡುತ್ತಿದೆ.ಪವರ್‍ಫುಲ್ ಕಾಮಿಡಿ ಜೊತೆ ಒಂದೊಳ್ಳೆ ಮೆಸೇಜನ್ನು ಹೊತ್ತು ತಂದಿರೋ 2 ಎಕ್ರೆ ಸಿನಿಮಾ; ಕೇವಲ ಕರಾವಳಿಯಲ್ಲಿ ಮಾತ್ರವಲ್ಲದೆ ಎಲ್ಲಾ ಕಡೆ ಒಂದಿಚ್ಚು ಬಿಡದೆ ಸೇಲಾಗುತ್ತಿದೆ.
ಇನ್ನು 2 ಎಕ್ರೆ ಸಿನಿಮಾದಲ್ಲಿ ಹೈಲೈಟಾಗಿದ್ದು ಮಾತ್ರ ಉಗುರುರಾಜ.. ಉಗುರುರಾಜ ಅನ್ನೋದು ಚಿಕ್ಕ ಪಾತ್ರವಾದ್ರು ಜನರ ಮನಸ್ಸಿನಲ್ಲಿ ಉಳಿಯುವ ಸನ್ನಿವೇಶವನ್ನು ನಿರ್ಮಿಸಿಕೊಟ್ಟಿದ್ದಾರೆ ನಿರ್ದೇಶಕ ವಿಸ್ಮಯ್ ವಿನಾಯಕ್ .ಅಂದಹಾಗೆ ಮಂಜು ರೈ ಮೂಳೂರು ಈ ಪಾತ್ರಕ್ಕೆ ಜೀವ ನೀಡಿದ್ದು ಡಿಫರೆಂಟ್ ಗೆಟಪ್ , ಡಿಫರೆಂಟ್ ಎಂಟ್ರಿ ಮೂಲಕ ಕಾಮಿಡಿ ವಿಲನ್ ಆಗಿ ಬೆಳ್ಳಿತೆರೆಯಲ್ಲಿ ಮಿಂಚಿದ್ದಾರೆ. ಮಾತ್ರವಲ್ಲ ಉಗುರಾಜನ ಎಂಟ್ರಿಗೆ ಇಡೀ ಚಿತ್ರಮಂದಿರವೇ ಎದ್ದು ಶಿಲ್ಲೆ ಹೊಡೆದಿದ್ದು; ಮಂಜು ರೈ ಪಾತ್ರಕ್ಕೆ ಪ್ರೇಕ್ಷಕ ಪ್ರಭು ಫುಲ್ ಮಾಕ್ರ್ಸ್ ನೀಡಿದ್ದಾನೆ.
ಸಂಜೀವ ಅನ್ನೋ ಹೆಸರಿನ ಮೇಲೆ ಕಥೆ ಹೆಣೆಯಲಾಗಿದ್ದು ,2 ಎಕ್ರೆಗೊಸ್ಕರ ನಿರ್ಮಾಣವಾಗೋ ಸನ್ನಿವೇಶಗಳೇ ಸಿನಿಮಾದ ಮೈನ್ ಹೈಲೈಟ್. ನವೀನ್ ಡಿ ಪಡೀಲ್ , ವಿಸ್ಮಯ್ ವಿನಾಯಕ್ ಚಿತ್ರದಲ್ಲಿ ಅಣ್ಣ ತಮ್ಮನಾಗಿ ಕಾಣಿಸಿಕೊಂಡಿದ್ದು ಇಬ್ಬರ ಜುಗಲ್ ಬಂದಿ ಮಸ್ತಾಗಿದೆ.ಅರವಿಂದ್ ಬೋಳಾರ್ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದು ಪೃಥ್ವಿ ಅಂಬರ್- ನಿರೀಕ್ಷಾ ಕೆಮೆಸ್ಟ್ರಿ ವರ್ಕೌಟಾಗಿದೆ.ಇನ್ನುಳಿದಂತೆ ಪ್ರಕಾಶ್ ತೂಮಿನಾಡ್, ರೂಪಾಶ್ರೀ ವರ್ಕಾಡಿ, ಶ್ರದ್ಧಾ ಸಾಲಿಯಾನ್ , ಸೋನಾಲ್ ಮೊಂತೆರೋ, ಉಮೇಶ್ ಮಿಜಾರ್ ಹೀಗೆ ಹಲವು ಕಲಾವಿದರು ಪಾತ್ರಕ್ಕೆ ಜೀವತುಂಬಿದ್ದಾರೆ . ಚಿತ್ರದಲ್ಲಿ ಮ್ಯೂಸಿಕ್ ಗುನುಗುನಿಸುವಂತಿದ್ದು , ಸಿನಿಮಾಟೋಗ್ರಫಿ ಸೂಪರ್ ಆಗಿದೆ.
ಒಟ್ಟಾರೆ ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸಿದ್ದು ವೀಕ್ಷಿಸಿದ ಅಷ್ಟೂ ಪ್ರೇಕ್ಷಕರು ಸಿನಿಮಾವನ್ನು ಶ್ಲಾಘಿಸಿದ್ದಾರೆ ಜೊತೆಗೆ ಇಂತಹ ಸಿನಿಮಾ ತುಳು ಇಂಡಸ್ಟ್ರಿಗೆ ಬೇಕಿದೆ ಅಂತ ಮುಕ್ತವಾಗಿ ಹೇಳಿಕೊಂಡಿದ್ದಾರೆ . ಗಿರಿಗಿಟ್ ಸಿನಿಮಾದ ನಂತರ ದಾಖಲೆ ಸೃಷ್ಟಿಸಲು ಹೊರಟಿರೋ 2 ಎಕ್ರೆ ಚಿತ್ರವನ್ನು ನೀವೂ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕು ನಲಿಯಿರಿ.