ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಕಲಾವಿದ, ನಾಯಕನಟರಾಗಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್ ನಿಧನಕ್ಕೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅತೀವ ದುಃಖ ವ್ಯಕ್ತಪಡಿಸಿದ್ದಾರೆ.
‘ಸುದರ್ಶನ ನಾಟಕ ಮಂಡಳಿ’, ‘ಶಕ್ತಿ ನಾಟಕ ಮಂಡಳಿ’ಯಿಂದ ರಜತಪರದೆಗೆ ಪ್ರವೇಶಿಸಿದ್ದ ರಾಜೇಶ್, ಆರಂಭದಲ್ಲಿ ವಿದ್ಯಾಸಾಗರ್ ಎಂಬ ಹೆಸರಿನಿಂದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರು. ‘ನಮ್ಮ ಊರು’ ಚಿತ್ರದ ಯಶಸ್ಸಿನ ಬಳಿಕ ರಾಜೇಶ್ ಆದರು. ‘ಗಂಗೆ ಗೌರಿ’, ‘ಸತಿ ಸುಕನ್ಯ’, ಬೆಳುವಲದ ಮಡಿಲಲ್ಲಿ’, ಸೊಸೆ ತಂದ ಸೌಭಾಗ್ಯ, ‘ದೇವರದುಡ್ಡು’, ‘ಕಲಿಯುಗ’, ‘ಪಿತಾಮಹ’ ಮುಂತಾದ ಹಲವಾರು ಸ್ಮರಣೀಯ ಚಿತ್ರಗಳಲ್ಲಿ ನಟಿಸಿದ್ದ ರಾಜೇಶ್ ತಮ್ಮ ಅಭಿನಯದಿಂದಲೇ ಜನಮನ ಗೆದ್ದಿದ್ದರು.
ರಾಜೇಶ್ ಅವರ ನಿಧನದಿಂದ ಚಿತ್ರರಂಗ ಹಿರಿಯ ನಟನನ್ನು ಕಳೆದುಕೊಂಡು ಬಡವಾಗಿದೆ. ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ, ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಾರ್ಥಿಸಿದ್ದಾರೆ.