ಬೆಂಗಳೂರು: ನಂದಿನಿ ಹಾಲಿನ ದರ ಹೆಚ್ಚಿಸಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ರಾಜ್ಯ ಸರ್ಕಾರ ಇದೀಗ ರೈತರ ವಿರೋಧವನ್ನೂ ಎದರಿಸುವಂತಾಗಿದೆ.
ಕೆಲವು ದಿನಗಳ ಹಿಂದಷ್ಟೇ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ಹಾಲಿನ ದರ ಹೆಚ್ಚಳ ಮಾಡಿ ಗ್ರಾಹಕರಿಗೆ ಶಾಕ್ ಕೊಟ್ಟಿತ್ತು. ಇದೀಗ ಕೋಚಿಮುಲ್ ಹಾಲು ಉತ್ಪಾದಕರಿಗೆ ಪ್ರತೀ ಲೀಟರ್ ಮೇಲೆ 2 ರೂಪಾಯಿ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಶುಕ್ರವಾರದಿಂದಲೇ ಜಾರಿಗೆ ಬರುವಂತೆ ಕೋಚಿಮುಲ್ ಆದೇಶ ಹೊರಡಿಸಿದೆ ಎಂದು ಮೂಲಗಳು ತಿಳಿಸಿವೆ. ಸೂಚಿಸಿದೆ.
ರೈತರ ಅಸಮಾಧಾನ;
ಕೋಚಿಮುಲ್ ಕ್ರಮಕ್ಕೆ ಹಾಲು ಉತ್ಪಾದಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವರೆಗೂ ಹಾಲು ಉತ್ಪಾದಕರಿಗೆ ಪ್ರತೀ ಲೀಟರಿಗೆ 33.40 ರೂಪಾಯಿ ನೀಡಲಾಗುತ್ತಿತ್ತು. ಇನ್ನು ಮಂದೆ ಪ್ರತೀ ಲೀಟರ್ಗೆ 31.40 ರೂಪಾಯಿ ಸಿಗಲಿದೆ ಎಂದು ಹಾಲು ಉತ್ಪಾದಕರು ಅಳಲು ತೋಡಿಕೊಂಡಿದ್ದಾರೆ.