‘ಸಲಾರ್’ ಚಿತ್ರ ದೇಶದ ಚಿತ್ರರಂಗದಲ್ಲಿ ಇತಿಹಾಸ ಬರೆದಿದೆ. ‘ಸಲಾರ್’ ಉತ್ತಮ ಗಳಿಕೆ ಮಾಡುತ್ತಿದ್ದು, ಭಾರತದಲ್ಲಿ 95 ಕೋಟಿ ರೂಪಾಯಿ ಬಾಚಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ಈ ಗಳಿಕೆ 175 ಕೋಟಿ ರೂಪಾಯಿ ಮೀರಿದೆ ಎನ್ನಲಾಗುತ್ತಿದೆ.
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ದೊಡ್ಡ ಗೆಲುವು ಕಂಡಿರುವ ಈ ಸಿನಿಮಾ ಕ್ರಿಸ್ಮಸ್ ರಜೆ ಸಂದರ್ಭದಲ್ಲಿ ಮತ್ತಷ್ಟು ಗಳಿಕೆ ಮಾಡುವ ವಿಶ್ವಾಸದಲ್ಲಿದೆ. ದೇವ ಪಾತ್ರದಲ್ಲಿ ಪ್ರಭಾಸ್, ವರದರಾಜ್ ಮನ್ನಾರ್ ಪಾತ್ರದಲ್ಲಿ ಪೃಥ್ವಿರಾಜ್ ಈ ಸಿನಿಮಾದಲ್ಲಿ ಗಮನ ಸೆಳೆದಿದ್ದಾರೆ.
© 2020 Udaya News – Powered by RajasDigital.